ನ್ಯೂಯಾರ್ಕ್, ಫೆ. 24 : ಅಮೆರಿಕದಲ್ಲಿ ಭಾರಿ ಹಿಮಪಾತವಾಗಿದ್ದು 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಅಮೆರಿಕದ ಈಶಾನ್ಯ ಭಾಗದಲ್ಲಿ ಮೇರಿಲ್ಯಾಂಡ್‌ನಿಂದ ಮೈನೆವರೆಗೆ ಭಾರಿ ಹಿಮ ಬಿರುಗಾಳಿ ಅಪ್ಪಳಿಸಿದೆ. ತೀವ್ರವಾದ ಗಾಳಿ ಮತ್ತು ಹಿಮಪಾತದ ಪರಿಣಾಮ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವ್ಯಾಪಾರ-ವಹಿವಾಟಿಗೆ ಅಡ್ಡಿಯುಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.
ಕಳೆದ ಒಂದು ದಶಕದಲ್ಲಿ ಅತ್ಯಂತ ಪ್ರಬಲವಾದ ಚಂಡಮಾರುತ ಇದು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ. ಸೋಮವಾರ ಅಮೆರಿಕದಲ್ಲಿ 5,600 ಕ್ಕೂ ಹೆಚ್ಚು ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ನಿಗದಿಯಾಗಿದ್ದ ಇನ್ನೂ 2,000 ವಿಮಾನಗಳನ್ನು ರದ್ದುಗೊಳಿಸಲಾಯಿತು. ಸುಮಾರು 2,500 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ ಎನ್ನಲಾಗಿದೆ.

