ತಣ್ಣೀರುಪoತ : ತಣ್ಣೀರುಪಂಥ ಗ್ರಾಮದ ಕೊಲ್ಯ-ಬೋಳ್ನಡ್ಕ ಭಾಗದ ನಾಗರಿಕರ ಹಲವಾರು ವರ್ಷದ ಬಹುಬೇಡಿಕೆಯ ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ನೀಡಿದ ಭರವಸೆಯಂತೆ ರೂ. 40 ಲಕ್ಷ ಅನುದಾನ ಒದಗಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡು ಸಂಚಾರಕ್ಕೆ ಸುಗಮವಾಗಿದೆ.

ರಸ್ತೆ ನಿರ್ಮಾನಕ್ಕೆ ಅನುದಾನ ಒದಗಿಸಿದ ಶಾಸಕರಿಗೆ ಸ್ಥಳೀಯ ನಾಗರಿಕರು ಅಭಿನಂದನೆ ಸಲ್ಲಿಸಿದರು.


