ಬಂದಾರು : ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

Advertisement

ಬಂದಾರು : ನೇತ್ರಾವತಿ ನದಿಯಲ್ಲಿ ಶನಿವಾರ ಮೊಸಳೆ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ನದಿ ಬದಿ ಹೋದವರಿಗೆ ನದಿಯ ಮಧ್ಯೆ ಮೊಸಳೆ ಈಜಾಡುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.

ನೇತ್ರಾವತಿ ನದಿ ಹರಿಯುವ ಹಲವು ಪ್ರದೇಶಗಳಲ್ಲಿ ಮೊಸಳೆ ತಿರುಗಾಟ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.  ಮುಂಡಾಜೆ, ಕಲ್ಮಂಜ, ಮೊಗ್ರು ಮೊದಲಾದ ಕಡೆಗಳಲ್ಲಿ ನೇತ್ರಾವತಿ ನದಿ ಹರಿದು ಬರುತ್ತಿದ್ದು ಈ ಭಾಗದ ಅಲ್ಲಲ್ಲಿ ಮೊಸಳೆಗಳು ಗೋಚರಿಸುತ್ತಿವೆ. ಇದರಿಂದ ಜನರು ನದಿಯತ್ತ  ಹೋಗಲು ಭಯಪಡುವ ಸ್ಥಿತಿ ಎದುರಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ನದಿಯ ಹಲವೆಡೆ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಬೇಕಿದ್ದು, ಮೊಸಳೆ ಅಲ್ಲಲ್ಲಿ ಇರುವ ಕಾರಣ ಕಾರ್ಮಿಕರು ನದಿಯತ್ತ ತೆರಳಲು ಹಿಂಜರಿಯುವಂತಾಗಿದೆ.

Advertisement

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ