ಬೆಳಾಲು : ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಯಶಸ್ವಿ ವಾರ್ಷಿಕ ಜಾತ್ರಾ ಮಹೋತ್ಸವದ  ಅಭಿನಂದನಾ ಕಾರ್ಯಕ್ರಮ, ಶ್ರೀ ದೇವರಿಗೆ ದೀಪಾಲಂಕಾರ ರಂಗಪೂಜೆ

ಬೆಳಾಲು, ಜ.14 : ಶ್ರೀ ಅನಂತಪದ್ಮನಾಭ ದೇವಸ್ಥಾನ ಜಾತ್ರೋತ್ಸವ ಯಶಸ್ವಿಯ ಬಗ್ಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಲೆಕ್ಕಪತ್ರ ಮಂಡನೆಯು ಜ.14 ರಂದು ಮಕರ ಸಂಕ್ರಾಂತಿಯ ದಿನ  ಶ್ರೀ ಕ್ಷೇತ್ರದ ವಠಾರದಲ್ಲಿ ನೆರವೇರಿತು.

ಈ ವೇಳೆ ಮಾತನಾಡಿದ, ಪೆರಿಯಡ್ಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ಇವರು ದೇವಸ್ಥಾನದ ಸ್ವಚ್ಛತೆ ಅಚ್ಚುಕಟ್ಟುತನ ಜಾತ್ರಾ ಮಹೋತ್ಸವದ ಯಶಸ್ವಿಗೆ ಸೇವೆ ಸಲ್ಲಿಸಿದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಊರ ಸಮಸ್ತ ಭಕ್ತ ಬಾಂಧವರಿಗೆ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸಿದರು. ದೇವಸ್ಥಾನದ ಪಾರದರ್ಶಕವಾದ ಲೆಕ್ಕಪತ್ರ ಮಂಡನೆಗೆ ಶ್ಲಾಘನೆ ವ್ಯಕ್ತಪಡಿಸಿ ದೇವಸ್ಥಾನವು ಜಿಲ್ಲೆಗೆ ಮಾದರಿ ದೇವಸ್ಥಾನ ಎಂದುಮೆಚ್ಚುಗೆ ವ್ಯಕ್ತ ಪಡಿಸಿದರು. ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀ ಲಿಂಗಪ್ಪ ಪೂಜಾರಿ ಬನಂದೂರು ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. 

Advertisement

  

ಈ ಸಂದರ್ಭದಲ್ಲಿ ಜಾತ್ರೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಾಮಾಜಿಕ ಜಾಲತಾಣ ಹಾಗೂ  ಮಾಧ್ಯಮಗಳಲ್ಲಿ  ಪ್ರಚಾರಪಡಿಸಿದ ಶ್ರೀ ಗಿರೀಶ್ ಗೌಡ.ಬಿ.ಕೆ ಕುಂಬುಡಂಗೆ -ಬಂದಾರು, ಕಾಮಗಾರಿ ಕೆಲಸದ ನಿರ್ವಹಣೆ ಮಾಡಿದ   ಶ್ರೀ ಹರೀಶ್  ಮುಂಡೆತ್ಯಾರ್ , ನಾಟಿ ಹೂಗಳಿಂದ  ಹೂಗುಚ್ಚಗಳ್ಳನ್ನು ನೀಡಿದ ಜ್ಞಾನವಿಕಾಸದ ಮಹಿಳೆಯರನ್ನು ಗೌರವಿಸಲಾಯಿತು.



ಜಾತ್ರೆಯ ಶ್ರಮದಾನ ಸಂದರ್ಭದಲ್ಲಿ ಗಾಯಗೊಂಡ  ರುಕ್ಮಯ ಗೌಡ ಏರ್ ದೊಟ್ಟು ಇವರಿಗೆ ಚಿಕಿತ್ಸೆಗಾಗಿ ಸಹಾಯ ಹಸ್ತವನ್ನು ನೀಡಲಾಯಿತು.

ವೇದಿಕೆಯಲ್ಲಿ ಕ್ಷೇತ್ರದ ಅಸ್ರಣ್ಣರಾದ ಗಿರೀಶ್ ಬಾರಿತಾಯ ಪಾರಲ, ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರಾದ ಮಮತಾ ದಿನೇಶ್ ಪೂಜಾರಿ ಉಪ್ಪಾರು,ಮಹಿಳಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ,ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಹರೀಶ್ ಪೋಸೊಟ್ಟು ಹಾಗೂ ಊರಿನ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅನಂತೋಡಿ ಶ್ರೀ ಅನಂತೇಶ್ವರ ಫ್ರೆಂಡ್ಸ್ ಇವರ ನಿರ್ವಹಣೆಯಲ್ಲಿ ಶ್ರೀ ಬೆಂಕಿನಾಥೇಶ್ವರ  ಕೃಪಾಪೋಷಿತ ದಶಾವತಾರ  ಯಕ್ಷಗಾನ ಮಂಡಳಿ ಬಾಳ – ಕಳವಾರು ಇವರಿಂದ ನಾಗರ ಪಂಚಮಿ ಎಂಬ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.

ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ ಗೌಡ ವಕೀಲರು ಪ್ರಸ್ತಾವಿಕ ಮಾತುಗಳನ್ನಾಡಿದರು. ವ್ಯವಸ್ಥಾಪನ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ ಧನ್ಯವಾದವಿತ್ತರು, ಗಿರೀಶ್ ಮಂಜೊತ್ತು ಕಾರ್ಯಕ್ರಮವನ್ನು ನಿರೂಪಿಸಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.