ರಬ್ಬರ್ ಕೃಷಿಕರ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಬೆಳ್ತಂಗಡಿ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್* ಅವರನ್ನು ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತ ರಕ್ಷಣಾ ವೇದಿಕೆಯಿಂದ ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ರಬ್ಬರ್ ಕೃಷಿಕರ ಸಮಸ್ಯೆ ಗಂಭೀರ ವಿಷಯವಾಗಿದ್ದು ಈ ಬಗ್ಗೆ ಸರಕಾರದ ಗಮನ ಸೆಳೆಯಲು ಮನವಿ ಸಲ್ಲಿಸಲಾಯಿತು.

Advertisement


ಮನವಿಯಲ್ಲಿ ಹಿಂದಿನ ಸರಕಾರಗಳು ರಬ್ಬರು ಕೃಷಿಗೆ ನೀಡಿದ ಪ್ರೋತ್ಸಾಹದಿಂದ  ನಮ್ಮ ರಾಜ್ಯದಲ್ಲಿಯೂ ಕೃಷಿಕ ಬೆಳೆಗಾರರು ದಕ್ಷಿಣಕನ್ನಡ,ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ  ವಾಣಿಜ್ಯ ಬೆಳೆಯಾಗಿ ರಬ್ಬರು ಕೃಷಿಯಲ್ಲಿ ತೊಡಗಿಕೊಂಡಿರುತ್ತಾರೆ. ಇದೀಗ ರಬ್ಬರು ಆದಾಯ ಕೃಷಿ ಖರ್ಚು-ವೆಚ್ಚ ಸರಿದೂಗಿಸದೇ ಇದ್ದು ಅವಲಂಬಿತ ಕೃಷಿಕರು ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ವಿವರಿಸಲಾಯಿತು. ರಬ್ಬರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಪಡಿಸುವಂತೆ ಸರಕಾರವನ್ನು  ಬೆಳೆಗಾರರ ಪರವಾಗಿ ಒತ್ತಾಯಿಸಲು ವಿನಂತಿಸಲಾಯಿತು.
ಈ ತಿಂಗಳ ಕೊನೆ ವಾರದಲ್ಲಿ ಉಜಿರೆಯಲ್ಲಿ ನಡೆಯುವ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಕೋರಿಕೆ ಸಲ್ಲಿಸಲಾಯಿತು. ವೇದಿಕೆಯ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹಾಗೂ ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು.
ಮನವಿಗೆ ಸ್ಪಂದಿಸಿದ ಸಚಿವರು ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹಾರದ ಕುರಿತು ತಕ್ಷಣ ಸರಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.