ಮಂಗಳೂರು : ವಿ.ವಿ.ಯ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ – ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು !

ಮಂಗಳೂರು, ಜೂ. 12 : ಮಂಗಳೂರು ವಿಶ್ವವಿದ್ಯಾಲಯದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಇಂದು ಪ್ರತಿಭಟನಾ ಸಭೆ ನಡೆಯಿತು. ಸಭೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

ಪ್ರತಿಭಟನಾ ನಿರತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆಯೂ ನಡೆಯಿತು. ಶಾಂತಿಯುತವಾದ ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಡೆಸಿದ ಪ್ರತಿಭಟನೆಯ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು ಖಂಡನೀಯವೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡನೆ ವ್ಯಕ್ತಪಡಿಸಿದೆ.

ಪ್ರತಿಭಟನೆ

ಕಳೆದ ಐದು ದಶಕಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅದಕ್ಕೆ ಪೂರಕವಾದ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿಯೂ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಿತ್ತು. ಆದರೆ ಕಳೆದ ಒಂದು ದಶಕದಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಅನೇಕ ಭ್ರಷ್ಟಾಚಾರ ಹಗರಣಗಳು ಹಾಗೂ ವಿ.ವಿ ಅಧಿಕಾರಿಗಳ ಕಾರ್ಯತತ್ಪರತೆ ಕೊರತೆಯಿಂದ ಇಂದು ಮಂಗಳೂರು ವಿವಿ ಅವನತಿಯ ಕಡೆಗೆ ಸಾಗಿದೆ ಎಂದರೆ ತಪ್ಪಾಗಲಾರದು. ಒಂದೊಮ್ಮೆ ಆರ್ಥಿಕವಾಗಿ ಶ್ರೀಮಂತವಾಗಿದ್ದ ವಿವಿ ಇಂದು ವಿದ್ಯಾರ್ಥಿಗಳಿಗೆ ಕನಿಷ್ಠ ಸೌಕರ್ಯಗಳನ್ನ ಕೂಡ ಒದಗಿಸಲು ಪರದಾಡುತ್ತಿರುವುದು ವಿಷಾದನೀಯ ಸಂಗತಿ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಮತ್ತು ವಿಶ್ವವಿದ್ಯಾನಿಲಯದ ಗುಣಮಟ್ಟದ ವೃದ್ಧಿಯ ಪೂರಕವಾಗಿ ಈ ಕೆಳಕಂಡ ಅಂಶಗಳನ್ನು ವಿಶೇಷ ಗಮನ ಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಗ್ರಹಿಸುತ್ತದೆ.

ಸಮಸ್ಯೆಗಳು

  1. ಅನವಶ್ಯಕ ಶುಲ್ಕ ವಸೂಲಿ ಮತ್ತು ಪರೀಕ್ಷಾ ಅಕ್ರಮಗಳು :

MBA ವಿದ್ಯಾರ್ಥಿಗಳಿಂದ ಲ್ಯಾಬ್ ಸೌಲಭ್ಯಗಳಿಲ್ಲದಿದ್ದರೂ ₹12,000 ಲ್ಯಾಬ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಹಾಗೆಯೇ ಸೈಬರ್ ಸೆಕ್ಯೂರಿಟಿ, ಮರೈನ್ ಜಿಯಾಲಜಿ, ಇಂಡಸ್ಟ್ರಿಯಲ್ ಕೆಮಿಸ್ಕಿ, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಶನ್ ಹಾಗೂ ಅನಾಲಿಟಿಕಲ್ ಕೆಮಿಸ್ಕಿ ಇಂಟರ್ನ್ ಶಿಪ್ ಬ್ಯಾಚ್ ವಿದ್ಯಾರ್ಥಿಗಳಿಂದ ಪರೀಕ್ಷೆಯೇ ಇಲ್ಲದಿದ್ದರೂ ₹3,650 ಪರೀಕ್ಷಾ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಎಲ್ಲಾ ಅನವಶ್ಯಕ ಶುಲ್ಕಗಳನ್ನು ತಕ್ಷಣ ರದ್ದುಗೊಳಿಸಿ, ಈಗಾಗಲೇ ವಸೂಲಿ ಮಾಡಿದ ಹಣವನ್ನು ಹಿಂತಿರುಗಿಸಬೇಕು. ಜೊತೆಗೆ ಕನ್ನೊಕೇಶನ್ ಶುಲ್ಕವನ್ನು ಮರುಪರಿಶೀಲಿಸಿ ಕಡಿತಗೊಳಿಸಬೇಕು.

  1. ಕುಡಿಯುವ ನೀರು, ಲ್ಯಾಬ್ ಮತ್ತು ಮೂಲಸೌಕರ್ಯಗಳ ಸುಧಾರಣೆ :
    ಬೋಟನಿ, ಅರ್ಥಶಾಸ್ತ್ರ, ಪ್ರಾಣಿಶಾಸ್ತ್ರ ವಿಭಾಗಗಳು ಹಾಗೂ ಸಭಾಂಗಣದಲ್ಲಿ ವಾಟರ್ ಪ್ಯೂರಿಫೈಯರ್‌ಗಳನ್ನು ಅಳವಡಿಸಬೇಕು. ಸೈನ್ಸ್ ಬ್ಲಾಕ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಫಿಲ್ಟರ್‌ಗಳನ್ನು ಒದಗಿಸಬೇಕು. ಲೈಬ್ರರಿ ಸೈನ್ಸ್, ಕಂಪ್ಯೂಟರ್ ಸೈನ್ಸ್ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳಿಗೆ PM-USHA ಯೋಜನೆಯಡಿ ಮಂಜೂರಾದ 64 ಕಂಪ್ಯೂಟರ್‌ಗಳನ್ನು ತಕ್ಷಣ ಪೂರೈಸಬೇಕು. ಹಾನಿಗೊಂಡ ಲ್ಯಾಬ್ ಉಪಕರಣಗಳು, ಕುರ್ಚಿಗಳು, AC ಹಾಗೂ ಇತರ ಮೂಲಸೌಕರ್ಯಗಳನ್ನು ದುರಸ್ತಿ ಅಥವಾ ಬದಲಿಸಬೇಕು.
  2. ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿ ಸೌಲಭ್ಯಗಳು :
    2013 ರಿಂದ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಖಾಯಂ ಬೋಧಕರನ್ನು ನೇಮಿಸಬೇಕು. ಮಾರ್ಕ್ಸ್ ಕಾರ್ಡ್ ವಿತರಣೆಯ ವಿಳಂಬ, SC/ST ವಿದ್ಯಾರ್ಥಿಗಳ EBL ವಿದ್ಯಾರ್ಥಿವೇತನ ಸಮಸ್ಯೆ ಹಾಗೂ ರಾಸಾಯನಿಕ ಖರೀದಿ ಟೆಂಡ‌ರ್ ವಿಳಂಬ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು.
  3. ಕ್ರೀಡಾ ಮತ್ತು ಕ್ಯಾಂಪಸ್ ಅಭಿವೃದ್ಧಿ :
    ಕಳೆದ ನಾಲ್ಕು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾದ ಕ್ರೀಡಾ ಸೌಕರ್ಯಗಳನ್ನು ಪುನಶ್ವೇತನಗೊಳಿಸಬೇಕು. ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ಬಳಸಿ ಹಾನಿಗೊಂಡ ಒಳಾಂಗಣ ಸೇರಿದಂತೆ ಎಲ್ಲಾ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು.
  4. ಪ್ಲೇಸ್‌ಮೆಂಟ್ ಮತ್ತು ಸಮಾನ ಅವಕಾಶಗಳು:
    ಕ್ಯಾಂಪಸ್ ನೇಮಕಾತಿ (Placement) ಚಟುವಟಿಕೆಗಳನ್ನು ಪುನರಾರಂಭಿಸಬೇಕು. ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ನೀಡಲಾಗುತ್ತಿರುವ ವಿಶೇಷ ಪ್ರವೇಶ ಸೌಲಭ್ಯಗಳನ್ನು ಸಾಮಾನ್ಯ ವಿದ್ಯಾರ್ಥಿಗಳಿಗೂ ಸಮಾನವಾಗಿ ಒದಗಿಸಿ, ಕ್ಯಾಂಪಸ್‌ನಲ್ಲಿನ ತಾರತಮ್ಯವನ್ನು ಕೊನೆಗೊಳಿಸಬೇಕು.
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.