ಕಾರ್ಕಳ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈದು ಗ್ರಾಮದ ಕುಡ್ಯೆ ಎಂಬಲ್ಲಿಂದ ಸುಮಾರು 1 ಯುನಿಟ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ.
ಪಿಕಪ್ ಚಾಲಕ ಜೀವಿತ್ ಹಾಗೂ ಈದು ಗ್ರಾಮದ ಪ್ರಶಾಂತ್ ಎಂಬವರ ವಿರುದ್ಧ ಆರೋಪ ಕೇಳಿಬಂದಿರುವುದು. ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರವಾನಿಗೆ ಪಡೆಯದೆ ನ. 6ರಂದು ಈದು ಗ್ರಾಮದ ಕುಡ್ಯೆ ಎಂಬಲ್ಲಿಂದ ಸುಮಾರು 1 ಯುನಿಟ್ ಮರಳನ್ನು ಕಳವು ಮಾಡಿ ನೂರಾಳ್ ಬೆಟ್ಟು ಕಡೆಯಿಂದ ಹೊಸ್ಮಾರ್ ಕಡೆಗೆ ಪಿಕಪ್‌ನಲ್ಲಿ ಸಾಗಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

