ಬಂಟ್ವಾಳ: ಅಕ್ರಮ ಗೋ ಸಾಗಾಟ ಆರೋಪ – ವಾಹನ ವಶಕ್ಕೆ, ಪ್ರಕರಣ ದಾಖಲು

ಬಂಟ್ವಾಳ, ಫೆ. 28 : ಅಕ್ರಮವಾಗಿಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ವಾಹನವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ.

Advertisement

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ವಿಟ್ಲ ಎಸೈ ರಾಮಕೃಷ್ಣ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಮಂಡ್ಯ ನಿವಾಸಿಗಳಾದ ಚಾಲಕ ನವೀನ ಹಾಗೂ ಚೇತನ್ ಎಂಬವರನ್ನು ವಿಚಾರಿಸಿದ್ದಾರೆ. ವಾಹನವೊಂದು ರಸ್ತೆ ಬದಿಯಲ್ಲಿ ನಿಂತಿದ್ದು, ಅದರಲ್ಲಿ ಎರಡೂ ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡಿಕೊಂಡು ಬಂದಿರುವುದು ಕಂಡುಬಂದಿರುತ್ತದೆ.

ಈ ಬಗ್ಗೆ ವಾಹನದಲ್ಲಿದ್ದ ಮಂಡ್ಯ ನಿವಾಸಿಗಳಾದ ಚಾಲಕ ನವೀನ ಹಾಗೂ ಮತ್ತೋರ್ವ ಚೇತನ್ ಎಂಬವರಲ್ಲಿ ವಿಚಾರಿಸಲಾಗಿ, ಚನ್ನರಾಯಪಟ್ಟಣದಿಂದ ಶಂಕರ ಎಂಬವರು ಸಾಲೆತ್ತೂರಿನ ಶಾಫಿ ಎಂಬವರಿಗೆ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತುಂಬಿಸಿ ಕಳುಹಿಸಿದ್ದು, ಜಾನುವಾರುಗಳನ್ನು ಸಾಗಿಸಲು ಬೇರೆಯವರ ಹೆಸರಿನಲ್ಲಿ ದಾಖಲಾತಿಯನ್ನು ಪಡೆದು ಸಾಗಿಸುತ್ತಿರುವುದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಳಗಾವಿ : ಪರೀಕ್ಷೆ ಬರೆಯಲು ಮನೆಯಿಂದ ಹೊರಡುತ್ತಿದ್ದ ವೇಳೆ ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು

ತಾಲೂಕು, ಬೆಳ್ತಂಗಡಿ

ಕಲ್ಮಂಜ : ಗುಂಡ ಶ್ರೀ ಉಳ್ಳಾಯ-ಉಳ್ಳಾಲ್ತಿ ದೈವಸ್ಥಾನದಲ್ಲಿ ಬಾವಿ ನಿರ್ಮಾಣಕ್ಕೆ ಶಂಕು ಸ್ಥಾಪನೆ

ತಾಲೂಕು, ಬೆಳ್ತಂಗಡಿ

ಕಣಿಯೂರು : ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಲೋಕಾರ್ಪಣೆ

⚠️ Contents are protected on this website.