ಕಾರ್ಕಳ : ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸ್ ದಾಳಿ – ಟೆಂಪೋ ವಶಕ್ಕೆ, ಆರೋಪಿಗಳು ಪರಾರಿ

Advertisement

ಕಾರ್ಕಳ, ಡಿ. 15 : ನಲ್ಲೂರು ಗ್ರಾಮದ ಮಿಯಾರು ಸೇತುವೆ ಬಳಿ ಇರುವ ನಲ್ಲೂರು ಕಿಂಡಿ ಆಣೆಕಟ್ಟು ಬಳಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಟೆಂಪೋವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

Advertisement

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕ ಸುಂದರ ಗೌಡ ಅವರು ಡಿ.13ರಂದು ನಲ್ಲೂರು ಗ್ರಾಮದ ಮಿಯಾರು ಸೇತುವೆ ಬಳಿ ಇರುವ ನಲ್ಲೂರು ಕಿಂಡಿ ಆಣೆಕಟ್ಟು ಬಳಿ ಹೋದಾಗ 407 ಟೆಂಪೋ ನಂಬ್ರ KA19-AA-1656 ನೇದರ ಚಾಲಕನು ಸಮವಸ್ತ್ರದಲ್ಲಿದ್ದ ಪೊಲೀಸನ್ನು ನೋಡಿ ಟೆಂಪೋ ನಿಲ್ಲಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಟೆಂಪೋವನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 8,000 ರೂ. ಮೌಲ್ಯದ ಅಂದಾಜು 1 ಯುನಿಟ್ನನಷ್ಟು ಮರಳು ಇದ್ದು ಟೆಂಪೋ ಚಾಲಕ ಮತ್ತು ಮಾಲಕರು ಸಂಘಟಿತರಾಗಿ ಸಂಬಂಧಪಟ್ಟ ಇಲಾಖೆಯಿಂದ ಪರವಾನಿಗೆ ಪಡೆಯದೆ ಸರಕಾರಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದಾರೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ