ಬೆಳ್ತಂಗಡಿ : ಅಳದಂಗಡಿಗೆ ಜೂ.14 ರಂದು ಭಾರತೀಯ ಕಬಡ್ಡಿ ಪಟು ಪವನ್ ಶೆಹ್ರಾವತ್ ಭೇಟಿ – ಕಬಡ್ಡಿಅಸೋಸಿಯೇಷನ್ ಜೊತೆ‌ ಜಂಟಿ ಸಮಾಲೋಚನಾ ಸಭೆ

ಅಳದಂಗಡಿ, ಜೂ. 10 : ಇತಿಹಾಸ ಪ್ರಸಿದ್ಧ ಅಳದಂಗಡಿ ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ ಇವರ ವತಿಯಿಂದ ಜೂ.14 ರಂದು ಅಳದಂಗಡಿಯಲ್ಲಿ‌ ನಡೆಯುವ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಭಾರತೀಯ ಕಬಡ್ಡಿ ತಂಡದ ನಾಯಕ ಪವನ್ ಶೆಹ್ರಾವತ್ ಮುಖ್ಯ ಅತಿಥಿಯಾಗಿ ಆಗಮಿಸುವ ಹಿನ್ನೆಲೆಯಲ್ಲಿ ತಾಲೂಕು ಕಬಡ್ಡಿ ಅಸೋಸಿಯೇಷನ್ ಜೊತೆಗೆ ಸಮಾಲೋಚನಾ ಸಭೆಯು ಬೆಳ್ತಂಗಡಿಯಲ್ಲಿ ಜೂ.10 ರಂದು ನಡೆಯಿತು.

Advertisement

ಅಧ್ಯಕ್ಷತೆ ಮತ್ತು ವಿಷಯ ಮಂಡನೆಯನ್ನು ಅಳದಂಗಡಿ ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ ಇದರ ಆಡಳಿತದಾರ ಶಿವಪ್ರಸಾದ ಅಜಿಲ ನಡೆಸಿದರು. ಸಭೆಯಲ್ಲಿ ತಾಲೂಕು ಕಬಡ್ಡಿ‌ ಅಸೋಸಿಯೇಷನ್ ಅಧ್ಯಕ್ಷ ರಂಜನ್ ಜಿ ಗೌಡ, ಜಿಲ್ಲಾ ಉಪಾಧ್ಯಕ್ಷರುಗಳಾದ ಹೇರಾಜೆ ಪೀತಾಂಬರ ಬಂಗೇರ ಮತ್ತು ನಾಮದೇವ ರಾವ್ ಮುಂಡಾಜೆ, ಜಿಲ್ಲಾ ಗೌರವ ಸಲಹೆಗಾರ ಹಾಗೂ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಕೃಷ್ಣಾನಂದ ರಾವ್ ಮುಂಡಾಜೆ, ಕಾರ್ಯಾಧ್ಯಕ್ಷ ರಾಜಶೇಖರ ಶೆಟ್ಟಿ ಮಡಂತ್ಯಾರು, ಉಪಾಧ್ಯಕ್ಷ ವಿಜಯ ಗೌಡ ವೇಣೂರು, ತಾ. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟತ್ತೋಡಿ, ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಪ್ರಭಾಕರ ನಾರಾವಿ, ಕಬಡ್ಡಿ ಸಂಘಟಕರಾದ ಸದಾಶಿವ ಅರ್ವ ಮತ್ತು ಮಧುಸೂಧನ ಸುವರ್ಣ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಉಪಸ್ಥಿತರಿದ್ದರು.

ಪವನ್ ಶೆಹ್ರಾವತ್ ಅವರಿಗೆ ಭವ್ಯ ಸ್ವಾಗತ ಹಾಗೂ ಮೆರವಣಿಗೆ, ಅಸೋಸಿಯೇಷನ್ ಕಡೆಯಿಂದ ಗೌರವಾರ್ಪಣೆ ಇತ್ಯಾದಿ ವಿಷಯ ಚರ್ಚಿಸಲಾಯಿತು. ಈ‌ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.