ಬೆಳ್ತಂಗಡಿ, ಫೆ. 05 : ಭಾರತ – ಪಾಕಿಸ್ತಾನ ವಿಭಜನೆ ವಿಚಾರವು ಇಂದಿಗೂ ಕೂಡಾ ಜೀವಂತವಾಗಿಯೇ ಇದೆ. ಇಂದಲ್ಲ, ನಾಳೆ ಭಾರತ ಮತ್ತೆ ಅಖಂಡ ಭಾರತ ನಿರ್ಮಾಣವಾಗುತ್ತದೆ ಎಂಬ ಗುರಿ ಭಾರತೀಯರದ್ದಾಗಿದೆ. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯು ಪ್ರಮುಖವಾಗಿ ಮುಸ್ಲಿಂ ಲೀಗ್‌ನ ಪ್ರತ್ಯೇಕ ರಾಷ್ಟ್ರದ ಬೇಡಿಕೆ, ಹೆಚ್ಚಾಗುತ್ತಿದ್ದ ಹಿಂದೂ-ಮುಸ್ಲಿಂ ಕೋಮು ಗಲಭೆಗಳು ಮತ್ತು ಬ್ರಿಟಿಷರ ‘ವಿಭಜಿಸಿ ಆಳಿ’ ನೀತಿಯಿಂದ ಸಂಭವಿಸಿತು. ಮುಹಮ್ಮದ್ ಅಲಿ ಜಿನ್ನಾ ನೇತೃತ್ವದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಪಾಕಿಸ್ತಾನದ ಅಗತ್ಯವನ್ನು ಪ್ರತಿಪಾದಿಸಲಾಯಿತು, ಇದು 14 ಆಗಸ್ಟ್ 1947 ರಂದು ಪಾಕಿಸ್ತಾನದ ಸೃಷ್ಟಿಗೆ ಕಾರಣವಾಯಿತು ಎನ್ನುವುದು ಇತಿಹಾಸ. ಆದರೆ, ದಲಿತ ಮುಖಂಡರೋರ್ವರು ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದು, ಇದೀಗ ರಾಜ್ಯದಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ.
ಸಂವಿಧಾನ ರಚನಾ ಸಭೆಗೆ ಅಂಬೇಡ್ಕರ್ ಹೋಗಬೇಕೆಂದಾದರೆ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಗೆಲ್ಲಲೇಬೇಕಿತ್ತು, ಸಂಸದರಾಗಬೇಕಿತ್ತು. ಆದರೆ, ಅವರು ಸಂವಿಧಾನ ರಚನಾ ಸಭೆಗೆ ಬರಬಾರದು ಎಂಬ ಕಾರಣಕ್ಕಾಗಿ ಡಾ. ಬಿ. ಆರ್ ಅಂಬೇಡ್ಕರ್ ಅವರನ್ನು ಮುಂಬೈ ಕ್ಷೇತ್ರದಲ್ಲಿ ಸ್ವತ: ಕಾಂಗ್ರೆಸ್ ಸೋಲಿಸಿತು. ಇದರಿಂದ, ಧೃತಿಗೆಡ ಅಂಬೇಡ್ಕರ್ ಇಂದಿನ ಪೂರ್ವ ಪಾಕಿಸ್ತಾನದಲ್ಲಿರುವ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಿ ಗೆದ್ದು, ಸಂಸದರಾಗುತ್ತಾರೆ. ಸಂವಿಧಾನ ರಚನಾ ಸಭೆಗೆ ತೆರಳುವ ಅರ್ಹತೆ ಪಡೆದ ಅಂಬೇಡ್ಕರ್ ಅವರನ್ನು ಹೇಗಾದರೂ ಮಾಡಿ ಸಂವಿಧಾನ ರಚನಾ ಸಭೆಗೆ ಬರದಂತೆ ತಡೆಹಿಡಿಯಲು ನೆಹರು ಮತ್ತು ಗಾಂಧೀಜಿ ಯೋಜನೆ ರೂಪಿಸುತ್ತಾರೆ. ಆ ಯೋಜನೆಯ ಫಲಶೃತಿಯೇ “ಭಾರತದ ಇಬ್ಭಾಗ” ಎಂದು ದಲಿತ ಮುಖಂಡ ಲಕ್ಷ್ಮಣ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಂಬೇಡ್ಕರ್, ದಲಿತರಿಗೆ ಮಾಡಿದ ಅನ್ಯಾಯದ ಸಮಗ್ರ ಚಿತ್ರಣ ತೆರೆದಿಟ್ಟ ದಲಿತ ಮುಖಂಡ ಲಕ್ಷ್ಮಣ್ – ಸಂಪೂರ್ಣ ವೀಡಿಯೋ ನೋಡಿ…

