ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತಕ್ಕೆ ವಿಶೇಷ ಜವಾಬ್ದಾರಿಯ ಆಹ್ವಾನ ನೀಡಿದ ಅಮೇರಿಕಾ !

ವಾಷಿಂಗ್ಟನ್‌ ಡಿಸಿ : ಜಗತ್ತಿನಲ್ಲಿ ಭಾರತದ ಸ್ಥಾನಮಾನ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಮೇರಿಕಾ ಸುಂಕ ಸಮರ ಸೇರಿದಂತೆ ಹಲವು ರೀತಿಯಲ್ಲಿ ಭಾರತಕ್ಕೆ ಹೊಡೆತ ನೀಡಲು ಮುಂದಾದರೂ ಕೂಡಾ ಅದು ಅಮೇರಿಕಾವನ್ನೇ ಸುಟ್ಟಿತ್ತಲ್ಲದೆ ಭಾರತವನ್ನು ಅಲುಗಾಡಿಸಲೂ ಸಾಧ್ಯವಾಗಲಿಲ್ಲ. ಇದೀಗ ಅದೇ ಅಮೇರಿಕಾ ಮತ್ತೆ ಭಾರತಕ್ಕೆ ಆಹ್ವಾನವೊಂದನ್ನು ನೀಡಿದೆ. ಅದು, ಜಾಗತಿಕ ಸಂಘರ್ಷಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಚನೆ ಮಾಡಲಾಗಿರುವ ಮಂಡಳಿಯಲ್ಲಿ ಭಾರತಕ್ಕೆ ಮಹತ್ತರ ಜವಾಬ್ದಾರಿ ವಹಿಸಲು ಮುಂದಾಗಿರುವುದು. ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಏನಾದರೂ ಹೇಳಿದರೆ ಅದಕ್ಕೊಂದು ತೂಕವಿದೆ ಎಂಬುದು ಅಮೇರಿಕಾಗೂ ಅರ್ಥವಾದ ಬಳಿಕ ಇದೀಗ ಶಾಂತಿ ಸ್ಥಾಪನೆಗಾಗಿ ಆಹ್ವಾನ ಪತ್ರವನ್ನು ಕಳುಹಿಸಿಕೊಟ್ಟಿದೆ. ಭಾರತ ಇಂದಿಗೂ ಕೂಡಾ ಜಾಗತಿಕ ಭೂಪಟದಲ್ಲಿ ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದೆಯಷ್ಟೇ ಅಲ್ಲದೇ, ತನ್ನ ಮಹತ್ವವನ್ನು ದಿನದಿಂದ ದಿನಕ್ಕೆ ವೃದ್ಧಿಸಿಕೊಳ್ಳುತ್ತಿದೆ.

Advertisement

ಗಾಜಾ ಸಂಘರ್ಷದಿಂದ ಪ್ರಾರಂಭವಾಗುವ ಜಾಗತಿಕ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ತಮ್ಮ ಶಾಂತಿ ಮಂಡಳಿಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತಕ್ಕೆ ಸ್ಥಾನ ನೀಡಿದ್ದಾರೆ. ಈ ಕುರಿತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದ್ದು, ಈ ಪತ್ರದ ಪ್ರತಿಯನ್ನು ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದೆ, ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್‌ ಅವರು, ಗಾಜಾ ಶಾಂತಿ ಸ್ಥಾಪನೆಯಲ್ಲಿ ಉಭಯ ರಾಷ್ಟ್ರಗಳು ನಿರವವಹಿಸಲಿರುವ ಪಾತ್ರವನ್ನು “ಅತ್ಯಂತ ಪ್ರಮುಖ” ಎಂದು ಕರೆದಿದ್ದಾರೆ.

“ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಗಟ್ಟಿಗೊಳಿಸುವ ಐತಿಹಾಸಿಕ ಮತ್ತು ಭವ್ಯವಾದ ನಿರ್ಣಾಯಕ ಪ್ರಯತ್ನದಲ್ಲಿ ಮತ್ತು ಜಾಗತಿಕ ಸಂಘರ್ಷಗಳನ್ನು ಪರಿಹರಿಸುವ ದಿಟ್ಟ ನಿರ್ಧಾರದಲ್ಲಿ, ನಾನು ಭಾರತದ ಸಹಕಾರವನ್ನು ಕೋರುತ್ತೇನೆ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಂಂತ್ರಿ ನರೇಂದ್ರ ಮೋದಿ ಅವರಿಗೆ ಗಾಜಾ ಶಾಂತಿ ಮಂಡಳಿ ಸೇರುವಂತೆ ಅಧಿಕೃತವಾಗಿ ಆಹ್ವಾನ ನೀಡುತ್ತಿದ್ದೇನೆ. ಪ್ರಧಾನಿ ಮೋದಿ ಅವರನ್ನು ಈ ಶಾಂತಿ ಮಂಡಳಿಗೆ ಆಹ್ವಾನಿಸುತ್ತಿರುವುದು ನನಗೆ ದೊರೆತ ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಹ್ವಾನ ಸ್ವೀಕರಿಸಲಿದೆಯೇ ಭಾರತ ?

ಗಾಜಾ ಶಾಂತಿ ಮಂಡಳಿಯ ಸದಸ್ಯತ್ವಕ್ಕೆ ಅಮೆರಿಕ ನೀಡಿರುವ ಆಹ್ವಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ. ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಭಾರತವು ಈ ಉಪಕ್ರವಮನ್ನು ಸೇರಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಮೆರಿಕ ಮಾತ್ರ ಗಾಜಾ ಶಾಂತಿ ಮಂಡಳಿಯಲ್ಲಿ ಭಾರತ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಪ್ರತಿಪಾದಿಸಿದೆ. ಅಲ್ಲದೇ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆಯ ಪ್ರಯತ್ನದಲ್ಲಿ, ಭಾರತಕ್ಕೆ ಅನೇಕ ಮಹತ್ವಪೂರ್ಣ ಜವಾಬ್ದಾರಿಗಳನ್ನೂ ನೀಡಲಾಗುವುದು ಎಂದು ಹೇಳಿದೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಡೊನಾಲ್ಡ್‌ ಟ್ರಂಪ್‌ ಅವರ ವೀಸಾ ಮತ್ತು ಸುಂಕ ಸಮರ ಮುಂತಾದ ಕಾರಣಗಳಿಂದಾಗಿ, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಸೂಕ್ಷ್ಮಗೊಂಡಿದೆ. ತನ್ನ ಜಾಗತಿಕ ಕಾರ್ಯತಂತ್ರದ ಯೋಜನೆಗಳಲ್ಲಿ ಭಾರತದ ಅಗತ್ಯತೆಯನ್ನು ಮನಗಂಡಿರುವ ಅಮೆರಿಕ, ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಆರಂಭಿಸಿದೆ. ಇದೇ ಕಾರಣಕ್ಕೆ ಭಾರತಕ್ಕ ಅಮೆರಿಕದ ನೂತನ ರಾಯಭಾರಿ ಸೆರ್ಗಿಯೋ ಗೋರ್‌ ಅವರು “ಭಾರತಕ್ಕಿಂತ ಅಗತ್ಯವಾದ ದೇಶ ಅಮೆರಿಕಕ್ಕೆ ಮತ್ತೊಂದಿಲ್ಲ” ಎಂದು ಹೇಳಿಕೆ ನೀಡಿದ್ದರು. ಇದೀಗ ಗಾಜಾ ಶಾಂತಿ ಮಂಡಳಿಯನ್ನು ಸೇರುವಂತೆ ಅಮೆರಿಕವು ಭಾರತವನ್ನು ಆಹ್ವಾನಿಸಿದೆ. “ಗಾಜಾಗೆ ಶಾಶ್ವತ ನೆಮ್ಮದಿಯನ್ನು ಒದಗಿಸುವ ಶಾಂತಿ ಮಂಡಳಿಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಹ್ವಾನವನ್ನು, ಭಾರತದ ಪ್ರಧಾನಮಂತಿ ನರೇಂದ್ರ ಮೋದಿ ಅವರಿಗೆ ತಲುಪಿಸಲು ತುಂಬಾ ಹೆಮ್ಮೆಯಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಮತ್ತು ಸಮೃದ್ಧಿಯನ್ನು ಸಾಧಿಸಲು, ಈ ಶಾಂತಿ ಮಂಡಳಿಯು ಪರಿಣಾಮಕಾರಿ ಆಡಳಿತವನ್ನು ಬೆಂಬಲಿಸುತ್ತದೆ” ಎಂದು ಸೆರ್ಗಿಯೊ ಗೋರ್‌ ಹೇಳಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಟ್ರಂಪ್‌ ಅವರು, ಸೆ.29ರಂದು ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ಸಮಗ್ರ ಯೋಜನೆಯ ಬಗ್ಗೆ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ನೆರವಾಗುವ ತಮ್ಮ 20 ಅಂಶಗಳ ಮಾರ್ಗಸೂಚಿಯ ಬಗ್ಗೆ ಉಲ್ಲೇಖಿಸಿದ್ದಾರೆ.

ಟ್ರಂಪ್‌ ಪತ್ರದಲ್ಲೇನಿದೆ?

“ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಮ್ಮ ಆಡಳಿತ ಪ್ರಸ್ತಾಪಿಸಿರುವ 20 ಅಂಶಗಳ ಮಾರ್ಗಸೂಚಿಯನ್ನು ಅನುಮೋದಿಸಿದೆ. ಈ ಎಲ್ಲಾ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುವ ಸಮಯ ಬಂದಿದ್ದು, ಯೋಜನೆಯ ಹೃದಯಭಾಗದಲ್ಲಿ ಶಾಂತಿ ಮಂಡಳಿ ಇದೆ. ಇದು ಅಮೆರಿಕವು ಇದುವರೆಗೆ ರಚಿಸಿದ ಅತ್ಯಂತ ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಮಂಡಳಿಯಾಗಿದೆ. ಇದನ್ನು ಹೊಸ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ಪರಿವರ್ತನಾ ಆಡಳಿತ ಸಮಿತಿಯಾಗಿ ಸ್ಥಾಪಿಸಲಾಗುವುದು. ನಾವು ನಮ್ಮ ಅದ್ಭುತ ಮತ್ತು ಬದ್ಧ ಪಾಲುದಾರರನ್ನು ಮತ್ತು ಹೆಚ್ಚು ಗೌರವಾನ್ವಿತ ವಿಶ್ವ ನಾಯಕರನ್ನು ಈ ಮಂಡಳಿಯ ಭಾಗವಾಗುವಂತೆ ಆಹ್ವಾನ ನೀಡುತ್ತೇವೆ” ಎಂದು ಡೊನಾಲ್ಡ್‌ ಟ್ರಂಪ್‌ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.