ಕುಪ್ಪೆಟ್ಟಿ : ಉರುವಾಲು ಗ್ರಾಮದ ಶ್ರೀ ಗಣೇಶ ಭಜನಾ ಮಂದಿರ (ರಿ.) ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣೆಯಂಗವಾಗಿ ಇಂದು ಅರ್ಧ ಏಕಾಹ ಭಜನೆ ಆರಂಭಗೊಂಡಿದೆ. ಗುರುವಾಯನಕೆರೆ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ಜಗದೀಶ್ ಶೆಟ್ಟಿ ಮೈರಾ ದೀಪ ಪ್ರಜ್ವಲಿಸುವ ಮೂಲಕ ಅರ್ಧ ಏಕಾಹ ಭಜನೆಗೆ ಚಾಲನೆ ನೀಡಿದರು.

ಬೆಳಗ್ಗೆ ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತಮಾನದವರೆಗೆ ತಾಲೂಕಿನ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನೆಯು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಅರ್ಚಕರಾದ ವೇದಮೂರ್ತಿ ಪ್ರಸನ್ನ ಮುಚ್ಚಿನ್ನಾಯರು ಹಲೇಜಿ, ರಾಜಗೋಪಾಲ ಭಟ್, ಉಂಡೆಮನೆ, ಜೀರ್ಣೋದ್ಧಾರ ಸಮಿತ್ ಅಧ್ಯಕ್ಷರು ಪ್ರವೀಣ್ ರೈ ಕುಪ್ಪೆಟ್ಟಿ, ಟ್ರಸ್ಟ್ ಅಧ್ಯಕ್ಷರು ರೋಹಿತ್ ಶೆಟ್ಟಿ ಪುಯಿಲ, ಭಜನಾ ಮಂಡಳ್ ಅಧ್ಯಕ್ಷರು ಹರೀಶ್ ನಾಯ್ಕ್, ಹೊಸಮಣ್ಣು, ಪಂಚಲಿಂಗೇಶ್ವರ ದೇವಸ್ಥಾನದ ಸಹ ಮೊಕ್ತೇಸರರಾದ ಸೀತಾರಾಮ ಆಳ್ವ ಕುರಿಂಜ, ಭಜನಾ ಸಮಿತಿ ಸಂಚಾಲಕರಾದ ಚಿದಾನಂದ ನಾಯ್ಕ್ ಹೊಸಮಣ್ಣು, ಪ್ರಮುಖರಾದ ವಾರಿಜಾ ವಿ ಶೆಟ್ಟಿ, ಸಂತೋಷ್ ಶೆಟ್ಟಿ ನರ್ಸಪಾಲ್, ಕಿಶನ್ ನಾಯ್ಕ್ ಮಜ್ಜೆ, ರವಿ ಪ್ರಕಾಶ್ ಭಟ್ ವಾದ್ಯಕೋಡಿ, ಸಂದೀಪ್ ಆಚಾರ್ಯ ಹಲೇಜಿ ಮತ್ತು ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತರು, ಊರವರು ಉಪಸ್ಥಿತರಿದ್ದರು.

ಇಂದಿನ ಅರ್ಧ ಏಕಾಹ ಭಜನೆಯಲ್ಲಿ ಶ್ರೀ ಗಣೇಶ ಭಜನಾ ಮಂದಿರ (ರಿ.), ಕುಪ್ಪೆಟ್ಟಿ ಶ್ರೀ ಮಹಮ್ಮಾಯಿ ಭಜನಾ ತಂಡ ಶಿವಾಜಿನಗರ- ಉರುವಾಲು, ಶ್ರೀ ಕೃಷ್ಣ ಭಜನಾ ಮಂದಿರ ಕರಾಯ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಉರುವಾಲು, ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ತಂಡ ಕೊರಿಂಜ, ಶ್ರೀ ಶ್ರೀರಾಮ ಗೆಳೆಯರ ಬಳಗ ಶ್ರೀರಾಮನಗರ-ಬಂದಾರು, ಶ್ರೀ ಉಮಾಮಹೇಶ್ವರ ಭಜನಾ ತಂಡ ಮಲೆಂಗಲ್ಲು, ಶ್ರೀ ರುದ್ರಗಿರಿ ಶ್ರೀ ಮೃತ್ಯುಂಜಯ ಹಾಗೂ ಶ್ರೀ ಶಾರದಾಂಬ ಭಜನಾ ಮಂಡಳಿ ತಣ್ಣೀರುಪಂತ, ಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿ ಶಿವಾಜಿನಗರ-ಕಣಿಯೂರು, ಶ್ರೀ ನಂದಿಕೇಶ್ವರ ಭಜನಾ ಮಂಡಳಿ ನಂದಿನಿನಗರ-ಉಪ್ಪಿನಂಗಡಿ, ಶ್ರೀ ರಾಮ ಭಜನಾ ಮಂದಿರ ಮುರ, ಶ್ರೀ ಸದಾಶಿವ ಭಜನಾ ಮಂಡಳಿ ಕುರಾಯ ತಂಡಗಳಿಂದ ನಿರಂತರ ಭಜನೆಯು ನಡೆಯಲಿದೆ.

