ಮಂಗಳೂರು : ಗುದದ್ವಾರದಲ್ಲಿ ಮೊಬೈಲ್ ಇಟ್ಟು ಜೈಲು ಪ್ರವೇಶಿಸಿದ ಕೈದಿ

Advertisement

ಮಂಗಳೂರು, ಮೇ. 01 : ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆದ ಕೈದಿಯೊಬ್ಬ ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಟ್ಟು ಜೈಲಿಗೆ ಪ್ರವೇಶಿಸುವಾಗ ಸಿಕ್ಕಿಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಎ.24ರಂದು ಮುಹಮ್ಮದ್ ತೋಹಿದ್ ಎಂಬ ಕೈದಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಿಸಲಾಗಿತ್ತು. ಎ.29ರಂದು ಆಸ್ಪತ್ರೆಯಿಂದ ತೋಹಿದ್ ಡಿಸ್‌ಜಾರ್ಜ್ ಆಗಿದ್ದು, ಸಂಜೆ 5:15ರ ವೇಳೆ ಮಂಗಳೂರು ಕೊಡಿಯಾಲ್‌ಬೈಲಿನ ಜಿಲ್ಲಾ ಕಾರಾಗೃಹಕ್ಕೆ ಕರೆ ತರಲಾಗಿತ್ತು. ಕಾರಾಗೃಹದ ಒಳಗೆ ಪ್ರವೇಶಿಸುವಾಗ ಕರ್ತವ್ಯ ದಲ್ಲಿದ್ದ ಕೆಎಸ್ ಐಎಸ್‌ಎಫ್ ಸಿಬ್ಬಂದಿಯು ಯಂತ್ರ ಬಳಸಿ ತಪಾಸಣೆ ನಡೆಸಿದಾಗ ಗುದದ್ವಾರದ ಬಳಿ ಶಬ್ದ ಕೇಳಿ ಬಂದಿದೆ. ವಿಚಾರಿಸಿದಾಗ ಮೊಬೈಲ್ ಬಚ್ಚಿಟ್ಟುಕೊಂಡಿರುವುದಾಗಿ ಕೈದಿ ತೋಹಿದ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೈದಿಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಕೀ ಪ್ಯಾಡ್ ಮೊಬೈಲನ್ನು ಹೊರಗೆ ತೆಗೆದಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ