ಕಣಿಯೂರು ಗ್ರಾಮ ಪಂಚಾಯತ್ ಸದಸ್ಯ ಗೆ ಹಲ್ಲೆ ಪ್ರಕರಣ – ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟ

ಬೆಳ್ತಂಗಡಿ, ಜೂ. 02 : ಕಳೆದ ಜುಲೈ 28- 2024 ರಂದು ತಾಲೂಕಿನ ಕಣಿಯೂರಿನಲ್ಲಿ  ಅಂಗಡಿ ವ್ಯಾಪಾರ ನಡೆಸುತ್ತಿದ್ದ  ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಪ್ರವೀಣ್ ಗೌಡ ಅವರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಸಹಚರರಾದ  ಕಿರಣ್ ಶಿಶಿಲ, ಪ್ರಜ್ವಲ್ ಕೆವಿ ಗೌಡ ಮತ್ತು ರಾಧಾಕೃಷ್ಣ ಗೌಡ ಬರಮೇಲು  ರವರು ಪ್ರವೀಣ್ ರವರ ಅಂಗಡಿ ಗೆ ಪ್ರವೇಶಿಸಿ ” ನೀನು ಮಹೇಶಣ್ಣ ನ ಬಗ್ಗೆ ಬಾರಿ ಮಾತನಾಡುತ್ತೀಯ ” ನೀನು ಪಂಚಾಯತ್ ಮೆಂಬರ್ ಎಂದು ಹಾರಾಡಬೇಡ ಎಂದು  ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದರು.

ಹಳ್ಳೆಗೊಳಗಾದ ಪ್ರವೀಣ್ ರವರು  ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಉಪ್ಪಿನಂಗಡಿ ಪೋಲೀಸರು ಪ್ರವೀಣ್ ರವರ ಹೇಳಿಕೆ ಯ ಪ್ರಕಾರ ಪ್ರಕರಣ ದಾಖಲಿಸಿ, ತನಿಖೆ ನಡೆಸಿ,ಬೆಳ್ತಂಗಡಿ ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಕ್ಕೆ  ಚಾರ್ಜ್ ಶೀಟ್ ಸಲ್ಲಿಸಿದ್ದರು.

ಪ್ರಕರಣ ದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಎ 1 ಕಿರಣ್ ಶಿಶಿಲ ಪ್ರಕರಣ ದ ವಿಚಾರಣೆ ಗೆ ಸರಿಯಾಗಿ  ಹಾಜರಾಗದ ಕಾರಣ ಆತನ ವಿರುದ್ಧ ಪ್ರತ್ಯೇಕ ವಿಭಜಿತ  ಪ್ರಕರಣ ದಾಖಲಿಸಿ, ಉಳಿದ ಆರೋಪಿಗಳಾದ  ಪ್ರಜ್ವಲ್ ಕೆವಿ ಗೌಡ ಮತ್ತು ರಾಧಾಕೃಷ್ಣ ಗೌಡ ಬರಮೇಲು ಅವರ ಮೇಲಿನ ಪ್ರಕರಣ ದ ವಿಚಾರಣೆಯನ್ನು ಕೈಗೊಂಡು ದಿನಾಂಕ 02.06.2026 ರಂದು ಅಂತಿಮ ಆದೇಶ ಮಾಡಿದೆ..

ಆದೇಶ ದ ಪ್ರಕಾರ ಪ್ರಜ್ವಲ್ ಕೆ. ವಿ ಗೌಡ ಹಾಗೂ ರಾಧಾಕೃಷ್ಣ ಗೆ ತಲಾ 6 ತಿಂಗಳ ಜೈಲು ಶಿಕ್ಷೆ ಮತ್ತು ರೂ 5,000  ದಂಡ ವಿಧಿಸಿ ಆದೇಶಿಸಿದೆ ಅಭಿಯೋಜನೆಯ ಪರವಾಗಿ  ಎ ಪಿ ಪಿ ದಿವ್ಯರಾಜ್  ವಾದಿಸಿದ್ದರು.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.