ಕುಪ್ಪೆಟ್ಟಿ ಡಿ.07 : ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ, ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣೆಯ ಅಂಗವಾಗಿ ಇಂದು ಪುಣ್ಯಾಹ ವಾಚನ, ನವಕ ಕಲಶ, ಅಧಿವಾಸ ಪ್ರಧಾನ ಹೋಮ, ಗಣಪತಿ ಹೋಮ, ಸುಮುಹೂರ್ತದಲ್ಲಿ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ ಹಾಗೂ ಯಾಗ ಮಂಟಪದಲ್ಲಿ “ಅಥರ್ವಶೀರ್ಷ ಗಣಯಾಗ” ನಡೆಯಿತು.

ಉರುವಾಲು ಗ್ರಾಮದ ಸೇವಾಕರ್ತರು 11 ದಿನಗಳ ಶುದ್ದ ಪ್ರತಾಚರಣೆಯಲ್ಲಿದ್ದು, ತಾವು ಅನುಷ್ಠಾನ ಮಾಡಿದ ಒಂದು ಮುಷ್ಟಿಗರಿಕೆಯನ್ನು “ಅಥರ್ವಶೀರ್ಷ ಗಣಯಾಗ”ಕ್ಕೆ ಸಮರ್ಪಿಸಿದರು.


