ನೆರಿಯ, ಜೂ. 18 : ಶಾಲೆ ಬಿಟ್ಟು ಕೆ.ಎಸ್.ಆರ್. ಟಿ.ಸಿ.ಬಸ್ ನಲ್ಲಿ ಮನೆಗೆ ತೆರಳುವಾಗ ಎಂಟನೇ ತರಗತಿಯ ಬಾಲಕನ ಕಾಲಿಗೆ ಬಲವಾಗಿ ಕೊಯ್ದ ಗಾಯವಾದ ಘಟನೆ ನಡೆದಿದೆ. ಮುಂಡಾಜೆಯ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ, ನೆರಿಯ ನೆಕ್ಕರೆ ಪಿ.ಆರ್. ಶಾಜಿ ಮತ್ತು ಸೌಮ್ಯ ದಂಪತಿಯ ಪುತ್ರ ಅರುಣ್ ಗಾಯಗೊಂಡವರು.
ಜೂ. 11ರಂದು ಸಂಜೆ ಬಸ್ ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಬಲ ಕಾಲಿನ ತೊಡೆ ಭಾಗ ಕತ್ತರಿಸಿದಂತಾಗಿದ್ದು ಹಾಕಿದ್ದ ಜೀನ್ಸ್ ಪ್ಯಾಂಟ್ ಹರಿದು, ರಕ್ತಸ್ರಾವವಾಗಿದೆ. ನೋವು ತಡೆದುಕೊಂಡು ನೆಕ್ಕರೆಯಲ್ಲಿರುವ ತನ್ನ ಮನೆಗೆ ಬಂದು ನೋಡಿದಾಗ ಗಾಯದ ತೀವ್ರತೆ ಗೊತ್ತಾಗಿದೆ.
ಕೂಡಲೇ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೀಗಿ ಚಿಕಿತ್ಸೆ ಕೊಡಿಸಿದ್ದು ನಾಲ್ಕು ಸ್ವಿಚ್ ಹಾಕಲಾಗಿದೆ.


