ಬಳ್ಳಮಂಜ, ಡಿ. 06 : ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಿಬಾಕಿಮಾರು ಗದ್ದೆಯಲ್ಲಿ 28ನೇ ವರ್ಷದ ಶೇಷ -ನಾಗ ಜೋಡುಕರೆ ಕಂಬಳವು ಆರಂಭಗೊಂಡಿದೆ. ಇಂದು ಬೆಳಗ್ಗಿನಿಂದಲೇ ಬಹಳ ವೈಭವದಿಂದ ಜೋಡುಕರೆ ಕಂಬಳ ನಡೆಯುತ್ತಿದೆ.
28ನೇ ವರ್ಷದ ಶೇಷ -ನಾಗ ಜೋಡುಕರೆ ಕಂಬಳದಲ್ಲಿ ಹಲವು ಕೋಣಗಳು ಸ್ಪರ್ಧೆಯಲ್ಲಿ ಭಾಗಿಯಾಗಿವೆ. ಹಾಗೆಯೇ, ಕಂಬಳ ಪ್ರೇಮಿಗಳು ಕೂಡಾ ಕರಾವಳಿಯ ಜಾನಪದ ಕ್ರೀಡೆಯನ್ನು ಕಣ್ತುಂಬಿಸಿಕೊಳ್ಳಲು ಆಗಮಿಸುತ್ತಿದ್ದಾರೆ.

