ಬಂದಾರು : ಮೈರೋಳ್ತಡ್ಕ ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ, ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

ಬಂದಾರು, ಡಿ. 15 : ಬಂದಾರು ಗ್ರಾಮ ಮೈರೋಳ್ತಡ್ಕ ದ.ಕ.ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಡಿ.13 ರಂದು ಶಾಲಾ ವಠಾರದಲ್ಲಿ ನೆರವೇರಿತು. ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಇವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಶಾಲಾ ಕೊಠಡಿ ನೀಲ ನಕಾಶೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.

Advertisement

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ ಪ್ರಸ್ತಾವನೆಗೈದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ನೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಗೆ ಬೆಂಚು, ಡೆಸ್ಕ್ ಕೊಡುಗೆ ನೀಡಿದ ದಾನಿಗಳಾದ ಶ್ರೀಮತಿ ಲೀಲಾವತಿ ಗಿರಿಯಪ್ಪ ಪೂಜಾರಿ ಸೊರಗೆದಡಿ, ಶ್ರೀಮತಿ ಮತ್ತು ಬಾಬು ಗೌಡ ಮಡ್ಯಲಕಂಡ, ನಡುಮಜಲು ಕುಟುಂಬಸ್ಥರು, ಶ್ರೀಮತಿ ವಾರಿಜ ಮತ್ತು ಧರ್ಣಪ್ಪ ಪೂಜಾರಿ ನೂಜಿ ಇವರುಗಳನ್ನು ಸನ್ಮಾನಿಸಲಾಯಿತು. ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೋಷಕರು, ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ ಸ್ಪರ್ಧೆಯು ನೇರವೇರಿತು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ನಿರುಂಬುಡ, ಅಂಡೆಕೇರಿ ಜುಮ್ಮಾ ಮಸೀದಿ ಧರ್ಮ ಗುರುಗಳಾದ ಶಫೀ ಅಹ್ಮನಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಪೊಲೀಸ್ ಪಿ.ಎಸ್ ವೆಂಕಪ್ಪ, ಹಿರಿಯ ವಿದ್ಯಾರ್ಥಿ ಅಂಚೆ ಇಲಾಖೆಯ ಸಹಾಯಕ ಅಧಿಕ್ಷಕರು ಮೋಹನ್ ಶೆಟ್ಟಿ ಬಾಂಗೇರು, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ, ಶ್ರೀಮತಿ ಸುಚಿತ್ರಾ ಮುರ್ತಾಜೆ, ಕುಪ್ಪೆಟ್ಟಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶ್ರೀಮತಿ ವಾರಿಜ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದು, ಶಿಕ್ಷಕರಾದ ದಿನೇಶ್ ಸ್ವಾಗತಿಸಿ, ಸಹಶಿಕ್ಷಕಿ ರಾಜಶ್ರೀ ನಿರೂಪಿಸಿ, ಶಿಕ್ಷಕರಾದ ಶ್ರೀಧರ್ ಧನ್ಯವಾದವಿತ್ತರು. ಬಹುಮಾನ ವಿಜೇತರ ಪಟ್ಟಿಯನ್ನು ಪ್ರಭು ನಾಯ್ಕ ಎಲ್, ಸುಶೀಲಾ, ಅರ್ಚನಾ, ವೀಕ್ಷಿತಾ ಇವರುಗಳು ವಾಚಿಸಿದರು, ತೀರ್ಥ ಕುಮಾರಿ ಸಾಂಸ್ಕೃತಿಕ ಸಂಯೋಜನೆ ಮಾಡಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.