ಬೆಳ್ತಂಗಡಿ, ಡಿ. 22 : ಬಂಗೇರ ಬ್ರಿಗೇಡ್ ಬೆಳ್ತಂಗಡಿ, ಶ್ರೀಮತಿ ಬಿನುತಾ ಬಂಗೇರರವರ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.) ಇದರ ಸಹಭಾಗಿತ್ವದಲ್ಲಿ ಜನವರಿ 15 ಗುರುವಾರದಂದು ಮಾಜಿ ಶಾಸಕರೂ, ಬೆಳ್ತಂಗಡಿ ಅಭಿವೃದ್ಧಿಯ ಹರಿಕಾರರೂ ಕೀರ್ತಿಶೇಷ ಕೆ.ವಸಂತ ಬಂಗೇರರವರ 80ನೇ ಹುಟ್ಟು ಹಬ್ಬದ ಪ್ರಯುಕ್ತ ಹೊನಲು ಬೆಳಕಿನ 65ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾಮಟ್ಟದ ಹಾಗೂ ದ.ಕ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಮ್ಯಾಟ್ ಕಬಡ್ಡಿ ಪಂದ್ಯಾಟ “ಬಂಗೇರ ಬ್ರಿಗೇಡ್ ಟ್ರೋಫಿ-2026” ಮದ್ದಡ್ಕದ ಬಂಡಿಮಠ ಮೈದಾನದಲ್ಲಿ ನಡೆಯಲಿದೆ.
ಈ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ. ಪ್ರೌಢಶಾಲಾ ವಿಭಾಗದ ಪಂದ್ಯಾಟಿ ಬೆಳಿಗ್ಗೆ 9.30ಕ್ಕೆ ಹಾಗೂ ಪುರುಷರ ವಿಭಾಗದ ಪಂದ್ಯಾಟ ಸಂಜೆ 4.00ಕ್ಕೆ ಸರಿಯಾಗಿ ಪ್ರಾರಂಭವಾಗುತ್ತದೆ. ಪ್ರೌಢಶಾಲಾ ವಿಭಾಗದ ಪಂದ್ಯಾಟದಲ್ಲಿ ದೇಹ ಹಾಗೂ ವಯಸ್ಸಿನ ಮಿತಿ ಇರುವುದಿಲ್ಲ, ಪ್ರೌಢಶಾಲಾ ವಿಭಾಗದ ತಂಡಗಳು ಶಾಲಾ ಮುಖ್ಯಸ್ಥರಿಂದ ದೃಢೀಕರಣ ಪತ್ರ ಹಾಗೂ ಶಾಲಾ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663883202, 7795217098 ಈ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

