ಚಾರ್ಮಾಡಿ, ಡಿ. 27 : ಅಯ್ಯಪ್ಪ ಸ್ವಾಮಿ ಭಕ್ತವೃಂದ ಬೀಟಿಗೆ, ಚಾರ್ಮಾಡಿ ಇದರ ಆಶ್ರಯದಲ್ಲಿ 43ನೇ ವರ್ಷದ ಮಂಡಲ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಡಿ. 26 ಶುಕ್ರವಾರ ಭಕ್ತಿ-ಭಾವದಿಂದ ಜರುಗಿತು.

43ನೇ ವರ್ಷದ ಮಂಡಲ ಪೂಜೆ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಮತ್ತೂರು ಪಂಚಲಿಂಗೇಶ್ವರ ಭಜನಾ ತಂಡ-ಚಾರ್ಮಾಡಿ, ಶ್ರೀ ಶಿವ ಪಾರ್ವತಿ ಭಜನಾ ತಂಡ-ಪರ್ಲಾಣಿ ಹಾಗೂ ಶ್ರೀ ಉಳ್ಳಾಯ ಉಳ್ಳಾಲ್ತಿ ಭಜನಾ ತಂಡ-ಬೀಟಿಗೆ ಚಾರ್ಮಾಡಿ ತಂಡಗಳಿಂದ ಕುಣಿತ ಭಜನಾ ಸೇವೆ ಜರುಗಿತು.

ಶ್ರೀ ಕುಶಾಲಪ್ಪ ಗೌಡ ಗುರುಸ್ವಾಮಿ ಇವರ ನೇತೃತ್ವದಲ್ಲಿ ಅಪ್ಪ ಸೇವೆ, ಮಂಡಲ ಮಹಾ ಪೂಜೆ ಜರುಗಿತು. ಆ ಬಳಿಕ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಕಾರ್ಯಕ್ರಮದಲ್ಲಿ ಅಯ್ಯಪ್ಪ ಭಕ್ತವೃಂದ ಬೀಟಿಗೆ ಚಾರ್ಮಾಡಿ ಇದರ ಅಧ್ಯಕ್ಷರು, ಸರ್ವಸದಸ್ಯರು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.



