ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧದ ಬುರುಡೆ ಷಡ್ಯಂತ್ರ ಪ್ರಕರಣ – ವರದಿಯ ಆದೇಶ ಡಿ.29ಕ್ಕೆ ಮುಂದೂಡಿ ಬೆಳ್ತಂಗಡಿ ಕೋರ್ಟ್ ಆದೇಶ

ಬೆಳ್ತಂಗಡಿ, ಡಿ. 27 : ಧರ್ಮಸ್ಥಳದ ವಿರುದ್ಧ ಕೇಳಿ ಬಂದಿದ್ದ ಬುರುಡೆ ಷಡ್ಯಂತ್ರ ಪ್ರಕರಣದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ 215 ಅಡಿಯಲ್ಲಿ ಸಲ್ಲಿಸಿದ ವರದಿಯ ಆದೇಶ ಡಿ. 26 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ನ್ಯಾಯಾಲಯವು ಆದೇಶವನ್ನು ಡಿ.29ಕ್ಕೆ ಮುಂದೂಡಿ ಆದೇಶಿಸಿದೆ.

Advertisement

ಬೆಳ್ತಂಗಡಿ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ನ.20 ರಂದು ವರದಿಯನ್ನು (u/s)215 ಅಡಿಯಲ್ಲಿ ಸಲ್ಲಿಸಿದ್ದು, ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್.ಟಿ, ವಿಠಲ್ ಗೌಡ, ಸುಜಾತ ಭಟ್ ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಈ ವರದಿಯ ಬಗ್ಗೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ.ಹೆಚ್.ಟಿ ಅವರು ವಿಚಾರಣೆ ನಡೆಸಿ ಡಿ.26 ರಂದು ಆದೇಶ ನಿಗದಿಪಡಿಸಿದ್ದರು. ಆದರೆ, ಡಿ.26 ರಂದು ವಿಚಾರಣೆ ನಡೆಸಿದ ನ್ಯಾಯಾಲಯವು ವರದಿಯ ಆದೇಶವನ್ನು ಮತ್ತೆ ಡಿ.29 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಬುರುಡೆ ಷಡ್ಯಂತ್ರ ಪ್ರಕರಣ ಸಂಬಂಧ ಉಜಿರೆಯ ಗಣೇಶ್ ಶೆಟ್ಟಿ ಮತ್ತು ಗಿರೀಶ್ ಮಟ್ಟಣ್ಣವರ್ ಇಬ್ಬರ ಮೊಬೈಲ್‌ ಎಸ್‌ಐಟಿ ವಶಕ್ಕೆ ಪಡೆದುಕೊಂಡಿತ್ತು. ಈ ಇಬ್ಬರ ಮೊಬೈಲ್ ಬಿಡುಗಡೆ ಮಾಡಿಸಲು ಬೆಳ್ತಂಗಡಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಡಿ.24 ರಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯ ಬಗ್ಗೆ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅರ್ಜಿಯ ಆದೇಶವನ್ನು ಡಿ.29 ಕ್ಕೆ ಮುಂದೂಡಿದ್ದಾರೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ ಎಸ್ಸಿ ಸಿ.ಎ.ಸೈಮನ್, ಡಿವೈಎಸ್ಪಿ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.