ಭಟ್ಕಳ : ಮುರಿನಕಟ್ಟೆಯು ಸುರಕ್ಷಿತವಾಗಿದೆ, ಗಲಭೆ ಪ್ರಕರಣ ಸಂಬಂಧ 6 ಮಂದಿಯ ಬಂಧನ – ಐಜಿಪಿ ಮಾಹಿತಿ !

ಭಟ್ಕಳ, ಮೇ 25 : ತಾಲೂಕಿನ ವೆಂಕಟಾಪುರದ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣ ಮಾಡಲಾದ ಮುರಿನಕಟ್ಟೆಗೆ ಹಾನಿ ಮಾಡಿದ್ದರ ಸಂಬಂಧ ಹಾಗೂ ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿದ್ದರ ಹಾಗೂ ರಾಷ್ಟ್ರೀಯ ಹೆದ್ದಾರಿ ಮೇಲೆ ಅಡಚಣೆ ಮಾಡಿದ ಕುರಿತು ಮತ್ತು ಗುಂಪು ಸೇರಿದ ಬಗ್ಗೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು 6 ಜನರನ್ನು ಬಂಧಿಸಲಾಗಿದೆ ಎಂದು ಮಂಗಳೂರು ವಲಯದ ಐಜಿಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.

Advertisement

ಎಸ್.ಪಿ. ದೀಪನ್ ಅವರು ಸುದ್ದಿಗಾರರೊಂದಿಗೆ ಪ್ರಕರಣದ ಕುರಿತು ಮಾತನಾಡಿ “ಮುರಿನಕಟ್ಟೆಯು ಸುರಕ್ಷಿತವಾಗಿದ್ದು ಯಾವುದೇ ಅನುಮಾನಕ್ಕೆ ಕಾರಣ ಇಲ್ಲ. ಮುರಿನಕಟ್ಟೆ ಕೆಡವಲಾಗಿದೆ ಎನ್ನುವ ಸುಳ್ಳು ಸುದ್ದಿ ಎಲ್ಲೆಡೆ ಹರಡಲಾಗಿದ್ದು ಯಾವುದೇ ಹಾನಿಯಾಗಿಲ್ಲ” ಎಂದು ಹೇಳಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವ ಸಮಯದಲ್ಲಿ ಹೆದ್ದಾರಿ ಪಕ್ಕದಲ್ಲಿದ್ದ ಮುರಿನಕಟ್ಟೆ ಸ್ಥಳಾಂತರ ಮಾಡಲು ಆದೇಶ ನೀಡಲಾಗಿತ್ತು. ಹಿಂದೂ ಕಾರ್ಯಕರ್ತರ ನಿರಂತರ ಹೋರಾಟದ ಬಳಿಕ ಎನ್.ಎಚ್.ಎ.ಐ. ಸಿಬಂದಿಗಳೇ ಪಕ್ಕದಲ್ಲಿ ಜಾಗ ಗುರುತಿಸಿ ಕೊಟ್ಟಿದ್ದಾರೆ. ಅನ್ಯ ಕೋಮಿನ ಯುವಕನೋರ್ವ ಕಟ್ಟೆಯ ವಿಡಿಯೋವನ್ನು ವೈರಲ್ ಮಾಡಿದ್ದು, ಜನ ಕಟ್ಟೆಯ ಹತ್ತಿರ ಜಮಾವಣೆಗೊಂಡು ಪರ್ಯಾಯ ಕಟ್ಟೆಗೆ ಹಾನಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗುಂಪನ್ನು ಸಮಾಧಾನ ಪಡಿಸಲು ಹೋದ ಪೊಲೀಸ್ ಅಧಿಕಾರಿಗಳ ಮೇಲೂ ನೂಕಾಟ ತಳ್ಳಾಟ ನಡೆದಿದ್ದು, ಬಳಿಕ ಗುಂಪನ್ನು ಚದುರಿಸಿ ಕಳುಹಿಸಲಾಗಿದೆ. ತಡ ರಾತ್ರಿ ಮತ್ತೆ ಕಟ್ಟೆಯನ್ನು ಕಟ್ಟಲು ಬಂದಿದ್ದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.

ಘಟನೆಗೆ ಸಂಬಂಧ ಪಟ್ಟಂತೆ ಗಲಭೆ, ಪುಂಡಾಟಿಕೆ, ನಗರ ಠಾಣೆ ಪೊಲಿಸರ ಮೇಲೆ ಹಲ್ಲೆ, ಹೆದ್ದಾರಿ ತಡೆ, ವ್ಯಕ್ತಿಯ ಮೇಲಿನ ಹಲ್ಲೆ, ಸಾಮಾಜಿಕ ಜಾಲ ತಾಣದಲ್ಲಿ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟಿರುವುದು ಸೇರಿ ಹಲವರ ಮೇಲೆ ಒಟ್ಟು 4 ಪ್ರಕರಣಗಳನ್ನು ದಾಖಲು ಮಾಡಿದ್ದು, ಈ ವರೆಗೆ 6 ಜನರನ್ನು ಬಂಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಎನ್‌ಎಸ್‌ಎಸ್ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.


ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದ್ದು ಹೆಚ್ಚಿನ ಬಂದೋಬಸ್ತ್ ಗಾಗಿ 9 ಕೆಎಸ್‌ಆರ್ ಪಿ ತುಕಡಿ, 3 ಡಿಎಆರ್ ತುಕಡಿ ಸೇರಿದಂತೆ ಜಿಲ್ಲೆಯಿಂದ 300 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಸ್ ಪಿ ದೀಪನ್ ಹೇಳಿದ್ದಾರೆ.

ಇದನ್ನೂ ಓದಿ…

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿ.ಕೆ ಹರಿಪ್ರಸಾದ್ ಕೆಪಿಸಿಸಿ’ಯ ನೂತನ ಅಧ್ಯಕ್ಷ ?

⚠️ Contents are protected on this website.