ಮಂಗಳೂರು : ಪೊಲೀಸರ ಬೈಕ್ ಕೂಡಾ ಬಿಡದ ಖದೀಮರು – ನಿಲ್ಲಿಸಿದ ಬೈಕ್ ಅರ್ಧ ಗಂಟೆಯಲ್ಲಿ ಕಳವು !

File Photo
Advertisement

ಮಂಗಳೂರು, ಜ. 08 : ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೆಬಲ್ ಓರ್ವರ ಬೈಕ್ ನಿಲ್ಲಿಸಿದ ಅರ್ಧ ಗಂಟೆಯಲ್ಲಿ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.

Advertisement

ನಗರದ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸ್ ಕಾನ್ ಸ್ಟೆಬಲ್ ಪುನೀತ್ ಬಿ.ವೈ ಅವರು ಜ.5ರಂದು ಕೆ.ಬಿ.ಕಟ್ಟೆಯಲ್ಲಿ ಕರ್ತವ್ಯಕ್ಕಾಗಿ ಸಂಜೆ 5.30 ಕ್ಕೆ ತಂದೆಯ ಹೆಸರಿನಲ್ಲಿರುವ ಹೋಂಡಾ ಶೈನ್ ಬೈಕ್ ನಲ್ಲಿ ಬಂದು ಅಲ್ಲಿನ ಸುಲಭ್ ಶೌಚಾಲಯದ ಪಾವತಿ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿ, ಕೆ.ಬಿ ಕಟ್ಟೆ ಜಂಕ್ಷನ್ ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು.

Advertisement

ಅನಂತರ ಸುಮಾರು 6 ಕ್ಕೆ ವಾಪಸು ಬಂದು ನೋಡಿದಾಗ ಬೈಕ್ ಕಳವಾಗಿತ್ತು ಎನ್ನಲಾಗಿದೆ. ಪೊಲೀಸರ ಬೈಕೆ ಕಳವಾಗುವಾಗ ಜನಸಾಮಾನ್ಯರ ಪಾಡೇನು ಎಂದು ಸಾರ್ವಜನಿಕರು ವಿಷಾದ ವ್ಯಕ್ತಪಡಿಸುತ್ತಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ