ಮಂಗಳೂರು : ಕಾಮಿಡಿ ಕಿಲಾಡಿ ಹಾಗೂ ಸಿನಿಮಾ ನಟ ರಾಕೇಶ್ ಅವರ ಜನುಮ ದಿನದ ಹಿನ್ನಲೆಯಲ್ಲಿ, ಅವರ ನೆನಪಿಗಾಗಿ ಮಂಗಳೂರಿನ ಸ್ನೇಹ ದೀಪ ಸಂಸ್ಥೆಯ ಮಕ್ಕಳೊಂದಿಗೆ BPS (ಬಲೆ ಪರ್ಕ ಸೇನೆ) ಸ್ನೇಹಿತರು ಹುಟ್ಟು ಹಬ್ಬವನ್ನು ಆಚರಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಸಂಸ್ಥೆಗೆ ಅಗತ್ಯ ವಸ್ತುಗಳು ಹಾಗೂ ಆರ್ಥಿಕ ಸಹಕಾರವನ್ನು ಮಾಡುವ ಮೂಲಕ BPS ಸದಸ್ಯರು ರಾಕೇಶ್ ಪೂಜಾರಿಯವರ ಹುಟ್ಟುಹಬ್ಬವನ್ನು ಆಚರಿಸಿದರು.


BPS (ಬಲೆ ಪರ್ಕ ಸೇನೆ) ಹೆಸರಿಗೆ ತಕ್ಕಂತೆ ತಮಾಷೆಗಾಗಿ ಶುರುವಾದ ವಾಟ್ಸಷ್ ಗ್ರೂಪ್ ಇಂದು ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಿದೆ. ಆತ್ಮೀಯ ಸ್ನೇಹಿತರ ಬಳಗವನ್ನು ಒಳಗೊಂಡಂತಹ ಈ ಗ್ರೂಪ್ “ತಮ್ಮ ಗ್ರೂಪ್ ಸದಸ್ಯನಾಗಿದ್ದ ರಾಕೇಶ್ ಪೂಜಾರಿ’ಯವರನ್ನು ಕಳೆದುಕೊಂಡು, ದು:ಖಕ್ಕೀಡಾಗಿತ್ತು. ನವೆಂಬರ್ ೧೫ ತಮ್ಮ ಸ್ನೇಹಿತ ರಾಕೇಶ್ ಪೂಜಾರಿಯವರ ಹುಟ್ಟು ಹಬ್ಬದ ದಿನದಂದು ಸಮಾಜಕ್ಕೆ ನೆರವಾಗೋಣ ಎಂಬ ಉದ್ಧೇಶದಿಂದ ಸ್ನೇಹ ದೀಪ ಎಂಬ ಸಂಸ್ಥೆಗೆ ತೆರಳಿ ಅಲ್ಲಿನ ಮಕ್ಕಳೊಂದಿಗೆ ಬಹಳ ಅರ್ಥಗರ್ಭಿತವಾಗಿ ರಾಕೇಶ್ ಪೂಜಾರಿಯವರ ಹುಟ್ಟುಹಬ್ಬವನ್ನು ಆಚರಿಸಿದರು. ಈ ಮೂಲಕ ತಮಾಷೆಗಾಗಿ ರಚನೆಗೊಂಡ ವಾಟ್ಸಾಪ್ ಗ್ರೂಪ್ ಇಂದು ಸಮಾಜಮುಖಿ ಸೇವೆಗಳ ಮುಖ ಮಾಡಿ, ಇಡೀ ಸಮಾಜಕ್ಕೆ ಮಾದರಿಯಾಗಿದೆ.

