ಮಂಗಳೂರು, ಜ. 04 : ಮಂಗಳೂರು ವಿಭಾಗದಿಂದ ಕೆ.ಎಸ್.ಆರ್.ಟಿ.ಸಿ ನಿಗಮದ ಕುಂದಾಪುರ/ ಉಡುಪಿ/ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆಯಾಗುವ ವಿವಿಧ ಮಾದರಿಯ ಪ್ರತಿಷ್ಠಿತ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10% ರಿಂದ 15% ವರೆಗೆ ಪ್ರಯಾಣ ದರಗಳನ್ನು ಕಡಿಮೆಗೊಳಿಸಲಾಗಿದ್ದು, ಜನವರಿ 5 ರಿಂದ ಈ ನೂತನ ಟಿಕೆಟ್ ದರ ಜಾರಿಗೆ ಬರಲಿದೆ ಎಂದು ಮಂಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬಾರಿ ಉತ್ಸವ : ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು ಕುಂದಾಪುರ ಪ್ರಯಾಣ ದರ (ಪ್ರತಿ ಪ್ರಯಾಣಿಕರಿಗೆ)- 1510 ರೂ., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು- ಉಡುಪಿ 1460 ರೂ., ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1350 ರೂ.
ಡ್ರೀಮ್ ಕ್ಲಾಸ್ : ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು ಕುಂದಾಪುರ ಪ್ರಯಾಣ ದರ 1350 ರೂ., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1300 ರೂ., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1200 ರೂ.,
ಮಲ್ಟಿ ಆಕ್ಸಿಲ್-2.0 : ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 1310 ರೂ., ಉಡುಪಿ-ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1250 ರೂ., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು ರೂ. 1150
ಮಲ್ಟಿ ಆಕ್ಸಿಲ್ : ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 1110 ರೂ., ಉಡುಪಿ-ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1060 ರೂ., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು ರೂ.1000
ನಾನ್ ಎಸಿ ಸ್ಲೀಪರ್ : ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 1050 ರೂ., ಉಡುಪಿ-ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1000 ರೂ, ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು ರೂ. 900
ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ : ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 1100 ರೂ., ಉಡುಪಿ-ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1060 ರೂ, ಮಂಗಳೂರು- ಬೆಂಗಳೂರು -ಮಂಗಳೂರು ರೂ. 950 ಹಾಗೂ ಬೆಂಗಳೂರು
ರಾಜಹಂಸ : ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 750 ರೂ., ಉಡುಪಿ-ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 700 ರೂ, ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು ರೂ. 650 ಇರಲಿದೆ.
ಸಾರಿಗೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


