ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯ ಸುಳಿವು ನೀಡಿದ ಸಾರಿಗೆ ಸಚಿವ ಬೈರತಿ ಸುರೇಶ್ !

ಬೆಂಗಳೂರು, ಜೂ 27 : ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯ ಸುಳಿವನ್ನು ಸಾರಿಗೆ ಸಚಿವ ಬೈರತಿ ಸುರೇಶ್ ನೀಡಿದ್ದಾರೆ.

Advertisement

ಈ ಕುರಿತು ಮಾದ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಕಾರಣ ರಾಜ್ಯ ಕಾರಣ ಅಂತ ಮಾತಾಡಲ್ಲ. ಇಡೀ ದೇಶದಲ್ಲಿ ತೈಲ ದರ ಹೆಚ್ಚಾಗಿದೆ. ಅದಕ್ಕೆ ಅನುಪಾತವಾಗಿ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾವನೆ ಇದೆ. ಪ್ರಸ್ತಾವನೆ ಇನ್ನೂ ಪರಿಶೀಲನೆಯಲ್ಲಿದೆ. ಸಿಎಂ ಜತೆ ಮಾತಾಡ್ತೇವೆ, ಸರ್ಕಾರ ಏನು ತೀರ್ಮಾನ ತಗೊಳ್ಳುತ್ತೋ ಅದರ ಪ್ರಕಾರ ಹೆಚ್ಚಿಸಲಾಗುತ್ತೆ ಎಂದು ತಿಳಿಸಿದರು.

ಬಸ್ ಟಿಕೆಟ್ ದರ ಹೆಚ್ಚಳ ವಿರೋಧ ಮಾಡಲು ಇಲ್ಲಿ ಕಾರಣನೇ ಇಲ್ಲ. ಬಿಜೆಪಿಯವರಿಗೂ ತೈಲ ದರ ಹೆಚ್ಚಾಗಿರೋದು ಗೊತ್ತು. ನಮ್ಮ ಸಾರಿಗೆಯ ನಾಲ್ಕು ನಿಗಮಗಳೂ ನಷ್ಟದಲ್ಲಿ ನಡೀತಿವೆ. ಐದು ಸಾವಿರ ಕೋಟಿ ನಷ್ಟದಲ್ಲಿ ಸಾರಿಗೆ ನಿಗಮಗಳು ನಡೀತಿವೆ. ಅದನ್ನು ಸರಿದೂಗಿಸಬೇಕಲ್ಲ, ಸಿಬ್ಬಂದಿಗೂ ವೇತನ ಕೊಡಬೇಕಲ್ಲ, ಬಸ್‌ಗಳಿಗೆ ಡೀಸೆಲ್ ಹಾಕಿಸಬೇಕಲ್ಲ. ಚರ್ಚೆ ಮಾಡಿ ಟಿಕೆಟ್ ದರ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.