ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

Advertisement

ಬಂಟ್ವಾಳ, ಏ. 17 : ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು 18 ಗ್ರಾಮ್ ತೂಕದ ಚಿನ್ನದ ಸರ ಕಳವಾಗಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ಸರಸ್ವತಿ ಎಂಬವರು ತನ್ನ ಮಗಳೊಂದಿಗೆ ಮಡಂತ್ಯಾರಿನಿಂದ ಪೊಳಲಿಗೆ ಹೋಗಲು ಧರ್ಮಸ್ಥಳ ದಿಂದ ಸ್ಟೇಟ್ ಬ್ಯಾಂಕಿಗೆ ಹೋಗುವ ಬಸ್ಸಿನಲ್ಲಿ ಏ.15ರಂದು ಬೆಳಗ್ಗೆ ಸುಮಾರು 8.20ಕ್ಕೆ ಹತ್ತಿದ್ದರು. ಬಸ್ ನಲ್ಲಿ ಜನಸಂದಣಿ ಇದ್ದು, ಮಗಳು ಕುಳಿತಿದ್ದರೆ, ಮಹಿಳೆ ನಿಂತು ಪ್ರಯಾಣಿಸಿದ್ದರು.

Advertisement

ಮಗಳೊಂದಿಗೆ ಬಿ.ಸಿ.ರೋಡಿನಲ್ಲಿ ಇಳಿಯುವ ವೇಳೆ ಸುಮಾರು 9 ಗಂಟೆಗೆ ಕುತ್ತಿಗೆ ನೋಡಿದ್ದು, ಈ ವೇಳೆ ಚಿನ್ನದ ಸರ ಇರಲಿಲ್ಲ. ಬಸ್ಸಿನಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಯಾರೋ ಕಳ್ಳರು ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಮಡಂತ್ಯಾರುನಿಂದ ಬಿ.ಸಿ ರೋಡ್ ಗೆ ಬರುವ ಸಮಯ ಬಸ್ಸಿನಲ್ಲಿ ಕಳ್ಳತನ ಮಾಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಕಳ್ಳತನವಾದ ಚಿನ್ನದ ಅಂದಾಜು ಮೌಲ್ಯ ಸುಮಾರು 2,50,000 ಆಗಬಹುದು ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ