ಕೊಯ್ಯೂರು : ಪ್ರಗತಿಪರ ಕೃಷಿಕ, ಕೊಡುಗೈ ದಾನಿ ಬೆರ್ಕೆ ಚಂದಪ್ಪ ಗೌಡ ನಿಧನ

Advertisement

ಕೊಯ್ಯೂರು : ಕೊಯ್ಯೂರು ಗ್ರಾಮ ಬಜಿಲ ಬೆರ್ಕೆ ನಿವಾಸಿ ಪ್ರಗತಿಪರ ಕೃಷಿಕ ಚಂದಪ್ಪ ಗೌಡ (56 ವ.) ಇಂದು ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮುಂಜಾನೆ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

Advertisement

ಮೃತರು ಪ್ರಗತಿ ಪರ ಕೃಷಿಕರು, ಸಹೃದಯಿ, ಕೊಡುಗೈ ದಾನಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡವರು. ಹರ್ಷ ಗೆಳೆಯರ ಬಳಗ ಬಜಿಲ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರು, ಹಾಗೆಯೇ ಬೆರ್ಕೆ ಉಮಿಯ ಬೈಲುಗಳ ಬೈಲುವಾರು ಸಮಿತಿಯ ಅಧ್ಯಕ್ಷರು.‌ ಸ.ಕಿ.ಪ್ರಾ. ಶಾಲೆಯ ವಜ್ರ ಮಹೋತ್ಸವ ಸಮಿತಿಯ ಕೋಶಾಧಿಕಾರಿಗಳಾಗಿದ್ದರು. ಇದೀಗ ಅವರ ಅಗಲುವಿಕೆ ಸಮಾಜಕ್ಕೆ ಅಪಾರ ನಷ್ಟವುಂಟಾಗಿದೆ. ಮೃತರು ಪತ್ನಿ, 2 ಹೆಣ್ಣು,ಒಬ್ಬ ಗಂಡು ಮಗ,ಕುಟುಂಬಸ್ಥರು ಬಂಧು ಮಿತ್ರರನ್ನು ಆಗಲಿದ್ದು, ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ