ಕಾರ್ಕಳ, ಫೆ. 10 : ಹಿರ್ಗಾನ ಗ್ರಾಮದ ಹಾಡಿ ಮೂಲ ಗರಡಿ ಶ್ರೀ ಬ್ರಹ್ಮಬೈದರ್ಕಳ ಮಾಯಂದಾಲ ದೇವಿ ಸನ್ನಿಧಿಯಲ್ಲಿ ಫೆ. 22ನೇ ಆದಿತ್ಯವಾರದಂದು ಪ್ರಪ್ರಥಮ ಬಾರಿಗೆ ಮಹಾ ಚಂಡಿಕಾ ಯಾಗ ಮತ್ತು ನೂತನ ಸುತ್ತುಪೌಳಿಯ ಶಿಲನ್ಯಾಸ ಕಾರ್ಯಕ್ರಮವು ಜರುಗಲಿದೆ.

ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರು ಇವರ ದಿವ್ಯ ಉಪಸ್ಥಿತಿಯಲ್ಲಿ, ವೇದಮೂರ್ತಿ ಬ್ರಹ್ಮ ಶ್ರೀ ವೆಂಕಟೇಶ ತಂತ್ರಿ ಇವರ ಆಚಾರ್ಯತ್ವದಲ್ಲಿ, ಶ್ರೀ ಶ್ರೀಕಾಂತ್ ಭಟ್ ಕಾನಂಗಿ ಇವರ ಸಹಭಾಗಿತ್ವದೊಂದಿಗೆ ಮಹಾ-ಚಂಡಿಕಾ ಯಾಗ ಮತ್ತು ವಿಖ್ಯಾತ ವಾಸ್ತುತಜ್ಞ ಶ್ರೀ ಪ್ರಮಲ್ ಕುಮಾರ್ ಕಾರ್ಕಳ ಹಾಗೂ ಶ್ರೀ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸದಾನಂದ ಪೂಜಾರಿ ಪಡುಮನೆ ಇವರ ಮಾರ್ಗದರ್ಶನದಲ್ಲಿ ನೂತನ ಸುತ್ತು ಪೌಳಿಯ ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ.
ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರು ಹಾಗೂ ವೇದಮೂರ್ತಿ ಬ್ರಹ್ಮ ಶ್ರೀ ವೆಂಕಟೇಶ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ, ಮಾಜಿ ಸಚಿವರು, ಮಾನ್ಯ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ಇವರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಲ್ಲದೆ, ಧಾರ್ಮಿಕ, ಒಳನಾಡು ಜಲಸಾರಿಗೆ, ಮೀನುಗಾರಿಕೆ ಮತ್ತು ಬಂದರು ಸಚಿವರಾದ ಶ್ರೀ ಮಂಕಾಳ್ ವೈದ್ಯ, ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ್ ಕೋಟ್ಯಾನ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮಂಜುನಾಥ ಪೂಜಾರಿ ಸೇರಿದಂತೆ ಹಲವಾರು ಗಣ್ಯರು ಘನ ಉಪಸ್ಥಿತಿ ಇರಲಿದ್ದಾರೆ. ಖ್ಯಾತ ವಾಗ್ಮಿಗಳು, ಲೇಖಕರು-ಅಂಕಣಕಾರರಾದ ಶ್ರೀಕಾಂತ್ ಶೆಟ್ಟಿ ಅವರು ಧಾರ್ಮಿಕ ಭಾಷಣ ಮಾಡಲಿದ್ದಾರೆ.

ದಿನಾಂಕ : 19-02-2026
ಸಾಯಂಕಾಲ 6.30 ರಿಂದ
ಪಂಚದೈವಿಕ ಬ್ರಹ್ಮಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಸಪ್ತ ಶುದ್ಧಿ, ವಾಸ್ತು ಪೂಜೆ. ವಾಸ್ತು ಹೋಮ, ರಾಕ್ಕೋಘ್ನ ಹೋಮ, ಬಿಂಬಾಧಿವಾಸ, ದಿಕ್ಕಾಲ ಬಲಿ, ಶಯ್ಯಾದಿ ವಾಸ ಹಾಗೂ ಪ್ರಸಾದ ವಿತರಣೆ
ದಿನಾಂಕ : 20-02-2026
ಬೆಳಿಗ್ಗೆ 8.30 ರಿಂದ
ಸ್ವಸ್ತಿ ಪುಣ್ಯಾಹವಾಚನ, ಪ್ರತಿಷ್ಠಾ ಪ್ರಧಾನ ಯಾಗ. ನಾಗ ಬಿಂಬ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ, ಆಶ್ಲೇಷ ಬಲಿ, ವಟು ಆರಾಧನೆ, ಪ್ರಸಾದ ವಿತರಣೆ, ಸಮಾರಾಧನೆ (ಅನ್ನ ಸಂತರ್ಪಣೆ)
ದಿನಾಂಕ : 22-02-2026
ಬೆಳಿಗ್ಗೆ 7.30 ರಿಂದ
ದೇವತಾ ಪ್ರಾರ್ಥನೆ, ಪುಣ್ಯಾಹವಾಚನ ಕ್ಷೇತ್ರಶುದ್ಧಿ ಮಹಾ ಸಂಕಲ್ಪ, ಗಣಯಾಗ, ಚಂಡಿಕಾ ಯಾಗ ಆರಂಭ
ಬೆಳಿಗ್ಗೆ 10 : 00 ರಿಂದ : ಪೂರ್ಣಾಹುತಿ
10 : 30 ರಿಂದ : ಮಹಾಪೂಜೆ, ಪ್ರಸಾದ ವಿತರಣೆ
11.00 ರಿಂದ : ವೃಷಭ ಲಗ್ನದಲ್ಲಿ ನೂತನ ಸುತ್ತು ಪೌಳಿಯ ಶಿಲಾನ್ಯಾಸ
11.30 ರಿಂದ : ಧಾರ್ಮಿಕ ಸಭಾ ಕಾರ್ಯಕ್ರಮ
ಮಧ್ಯಾಹ್ನ 1.30 ರಿಂದ : ಮಹಾ ಅನ್ನ ಸಂತರ್ಪಣೆ
2.00 ರಿಂದ : ಕಲ್ಲಡ್ಕ ಶ್ರೀ ವಿಠಲ ನಾಯಕ್ ಬಳಗದವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ನಡೆಯಲಿದೆ.

