ಚಳಿಯ ತೀವ್ರತೆಗೆ ನಡುಗಿದ ಜನತೆ – ನಾಳೆ ಮತ್ತಷ್ಟು ಕನಿಷ್ಠ ತಾಪಮಾನ ?

ಬೆಳ್ತಂಗಡಿ, ಡಿ. 13 : ಈ ಬಾರಿಯ ಚಳಿಯ ತೀವ್ರತೆಗೆ ಜನತೆ ಗಡಗಡ ನಡುಗುತ್ತಿದ್ದಾರೆ. ತಾಲೂಕಿನಲ್ಲಿ ಕನಿಷ್ಟ 17 ಡಿಗ್ರಿಗೆ ತಾಪಮಾನ ಕುಸಿದಿರುವುದು ಮನೆಯಲ್ಲಿದ್ದರೂ ತಣ್ಣನೆಯ ಚಳಿ ವಾತಾವರಣವೇ ಕಂಡುಬಂದಿದೆ. ದಿನೇ ದಿನೇ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ 8 ಗಂಟೆ ವರೆಗೂ ಮಂಜು ಕವಿದ ವಾತವರಣವೇ ಇರುತ್ತಿದ್ದು, ಸಂಚರಿಸುವವರಿಗೆ ಒಂದೆಡೆ ವಾತಾವರಣ ತಂಪು ನೀಡಿದರೂ, ಇನ್ನೊಂದೆಡೆ ಅಬ್ಬಬ್ಬಾ ಚಳಿ ಎನ್ನುವಂತಾಗಿದೆ. ಆಕಾಶವೇ ನೆಲಕ್ಕೆ ತಾಗಿದ ರೀತಿಯಲ್ಲಿ ಆವರಿಸಿಕೊಳ್ಳುತ್ತಿರುವ ದಟ್ಟವಾದ ಇಬ್ಬನಿ ಶೀತ ವ್ಯಾದಿಗಳು ಆವರಿಸುವ ಆತಂಕ ಸೃಷ್ಟಿಸಿದೆ.

Advertisement

ಇಬ್ಬನಿಯ ತೀವ್ರತೆಗೆ ಹಾಲು, ಹೂವು, ತರಕಾರಿ ಮಾರಾಟ, ಮನೆ ಮನೆಗೆ ಪೇಪರ್‌ ಹಂಚಿಕೆ ಸೇರಿದಂತೆ ಇನ್ನಿತರ ಕಾರ್ಯಗಳಿಗೂ ಅಡ್ಡಿ ಉಂಟಾಗಿದೆ. ಮೈ ಕೊರೆಯುವ ಚಳಿಯಿಂದಾಗಿ ಬೆಳಗ್ಗಿನ ಜಾವ ಬಹುತೇಕ ಮನೆಗಳ ಮುಂದೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಸಂಜೆ ಆರು ಗಂಟೆಯ ಬಳಿಕ ತಂಗಾಳಿಯ ಅನುಭವ ಆರಂಭವಾಗುತ್ತಿದೆ.

ಕೆಮ್ಮು, ಶೀತ, ಜ್ವರ: ಚಳಿಗಾಲ ಚಳಿಯೊಂದಿಗೆ ರೋಗಗಳನ್ನು ತರುತ್ತವೆ ಎಂಬ ಆತಂಕ ಮನೆ ಜನರಲ್ಲಿ ಮಾಡಿದ್ದು, ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಇಬ್ಬನಿ ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಬ್ಬನಿಯಲ್ಲಿ ಕೆಲಸ ಮಾಡುವ ನಾಗರಿಕರಿಗೆ ಕೆಮ್ಮು, ಶೀತ, ಜ್ವರ ಆವರಿಸಿದೆ. ಬಹಳಷ್ಟು ಮಂದಿ ನಾಗರಿಕರು ಈ ಇಬ್ಬನಿಯ ಕಾಟ ತಾಳಲಾರದೇ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ವಯೋ ವೃದ್ದರು, ಮಹಿಳೆಯರು, ಮಕ್ಕಳಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ರಾತ್ರಿಯಿಡೀ ಮಳೆಯಂತೆ ಸುರಿಯುವ ಇಬ್ಬನಿ ಬೆಳಗ್ಗೆ 8 ಗಂಟೆಯಾದರೂ ಮರೆಯಾಗುತ್ತಿಲ್ಲ. ಈಗಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಇಬ್ಬನಿ ಸೀಳಿಕೊಂಡು ನಡುಗುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಾಂತರ ಭಾಗಗಳ ರಸ್ತೆಗಳು ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಬೀಳುತ್ತಿರುವ ಹಿಮ ವಾಹನ ಚಾಲನೆ ಮಾಡುವರಿಗೆ ದಾರಿ ಕಾಣದಂತೆ ಮಾಡಿದ್ದು, ಅಪಾಯದ ಆತಂಕ ತಂದೊಡ್ಡಿದೆ. ತಾಲೂಕಿನಲ್ಲಿ ಕಾಣಿಸಿಕೊಳ್ಳುತ್ತಿರುವ ದಟ್ಟವಾದ ಇಬ್ಬನಿ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿದೆ. ಮನೆಯ ಮುಂದೆ ಮುಂಜಾವಿನ ಜಾವ ಹಿಮದ ಹೊದಿಕೆ ಕಂಡುಬರುತ್ತಿದೆ. ರಾತ್ರಿಯಿಂದ ಸುರಿಯುವ ಹಿಮವು, ಬೆಳಗ್ಗಿನ ಜಾವ ಕಂಡಾಗ ಮಳೆ ಬಂದ ಅನುಭವವನ್ನು ನೀಡುತ್ತಿದೆ.

ಧ್ವನಿ ನ್ಯೂಸ್ ಕಳಕಳಿ…

ಚಳಿಗಾಲದ ಹಿನ್ನೆಲೆಯಲ್ಲಿ ಆದಷ್ಟು ಬೆಚ್ಚನೆಯ ಉಡುಪುಗಳನ್ನು ಧರಿಸಿ.
ಚಳಿ ಕಳೆಯುವವರೆಗೆ ಬಿಸಿಯೂಟ, ಬಿಸಿ ನೀರನ್ನೆ ಸೇವಿಸಿ.
ಗ್ರಾನೈಟ್‌ ಬಳಕೆ ಮಾಡಿರುವ ಮನೆಗಳಲ್ಲಿ ಆದಷ್ಟು ಸಾಕ್ಸ್‌ ಬಳಸಿ ಓಡಾಡಿ.
ಬೈಕ್‌ ಓಡಿಸುವಾಗ ಹೆಲ್ಮೆಟ್‌ ಬಳಸಿ, ಶೀತಗಾಳಿಯಿಂದ ಪಾರಾಗಿ
ರಾತ್ರಿ, ಮುಂಜಾನೆ ಆದಷ್ಟು ವಾಹನ ಚಾಲನೆಯಿಂದ ದೂರವಿರಿ
ಬೆಳಗ್ಗೆಯೇ ತಣ್ಣೀರಿನಲ್ಲಿ ಸ್ನಾನ ಮಾಡುವುದು ಉತ್ತಮವಲ್ಲ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

ಟಾಪ್ ಸುದ್ದಿಗಳು, ರಾಜ್ಯ / ದೇಶ

ತಮಿಳುನಾಡು : ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10,000 ರೂ. ಘೋಷಣೆ !

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

⚠️ Contents are protected on this website.