ಬಂದಾರು, ಜು. 19 : ಹಟ್ಟಿಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಪೆರ್ಲ -ಬೈಪಾಡಿ ಅಡೆಂಕಿರಿಮಜಲು ಸೇಸಪ್ಪ ಗೌಡರ ಮನೆಯಲ್ಲಿ ನಡೆದಿದೆ. ಜುಲೈ 19 ರಂದು ಮುಂಜಾನೆ ಸರಿ ಸುಮಾರು 2.30ರ ಸುಮಾರಿಗೆ ಕರುವಿನ ಮೇಲೆ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ.
ಹಲವಾರು ದಿನಗಳಿಂದ ಕಾಡಂಡ, ಬೈಪಾಡಿ ಪ್ರದೇಶದಲ್ಲಿ ತಿರುಗಾಡುತಿದ್ದು, ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಅರಣ್ಯ ಇಲಾಖೆಯವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


