ರಾಷ್ಟ್ರ ರಾಜಧಾನಿಯ 9 ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಹಾಗೂ ಇ-ಮೇಲ್‌ : ಕಟ್ಟೆಚ್ಚರ

ಹೊಸದಿಲ್ಲಿ, ಫೆ. 09 : ರಾಷ್ಟ್ರ ರಾಜಧಾನಿ ದೆಹಲಿಯ ಬರೋಬ್ಬರಿ 9 ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಹಾಗೂ ಇ-ಮೇಲ್‌ ಗಳು ಬಂದಿವೆ. ದೆಹಲಿಯಲ್ಲಿ ಇತ್ತೀಚೆಗೆ ಖಲಿಸ್ತಾನಿ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿದ್ದು, ದೆಹಲಿಯಲ್ಲಿ ಗೋಡೆಗಳ ಮೇಲೆ ಖಲಿಸ್ತಾನಿ ಪರವಾದ ಬರಹಗಳನ್ನು ಬರೆದ ಪ್ರಕರಣ ಕೊಂಚ ಸದ್ದು ಕಡಿಮೆ ಮಾಡಿದಂತೆಯೇ ಈಗ ಬಾಂಬ್‌ ಬೆದರಿಕೆ ಬಂದಿದೆ.

Advertisement

ಸದ್ಯ, ಈ ಬಾಂಬ್‌ ಬೆದರಿಕೆ ಕರೆಗಳು ದೆಹಲಿಯ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದು, ಅದರಲ್ಲೂ ಪ್ರಮುಖವಾಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆಗಳು ಬಂದಿರುವುದರಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಈ ಕುರಿತಂತೆ ತಕ್ಷಣವೇ ತನಿಖೆಗಿಳಿದಿರುವ ಪೊಲೀಸರು ಸೇರಿದಂತೆ ಅಗ್ನಿಶಾಮಕ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರಿಯ ದಳಗಳ ಸಿಬ್ಬಂದಿಗಳು ತುರ್ತು ಕಾರ್ಯಚರಣೆ ನಡೆಸುತ್ತಿದ್ದಾರೆ.

ಈ ಕುರಿತು ಪೊಲೀಸರುವ ನೀಡಿರುವ ಮಾಹಿತಿ ಪ್ರಕಾರ, ಸೋಮವಾರ(ಫೆ.9) ರಾಷ್ಟ್ರ ರಾಜಧಾನಿಯ ಕನಿಷ್ಠ ಒಂಬತ್ತು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಮತ್ತು ಇಮೇಲ್‌ಗಳು ಬಂದಿವೆ. ಈ ಬಾಂಬ್‌ ಬೆದರಿಕೆ ಸಂದೇಶಗಳು ಬೆಳ್ಳಿಗೆ ಸುಮಾರು 8:30 ರಿಂದ 9:00ಯ ನಡುವೆ ಬಂದಿದ್ದು, ಇಂದು ಮಧ್ಯಾಹ್ನ 1:11 ರ ಸುಮಾರಿಗೆ ಸ್ಫೋಟ ಸಂಭವಿಸುವ ಬಗ್ಗೆ ಬೆದರಿಕೆ ಸಂದೇಶಗಳು ಬಂದಿವೆ. ಹಾಗಾಗಿ ಬೆದರಿಕೆ ಬಂದಿರುವ ಶಾಲೆಗಳಲ್ಲಿ ತಕ್ಷಣವೇ ತುರ್ತು ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಲಾಗಿದ್ದು, ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಬಾಂಬ್‌ ಬೆದರಿಕೆ ಇರುವ ಕೆಲ ಶಾಲೆಗಳಲ್ಲಿ ಮಕ್ಕಳು ಹಾಗೂ ಶಾಲಾ ಸಿಬ್ಬಂದಿಗಳನ್ನು ಬೇರೆಡೆ ಸ್ಥಳಾಂತರಿಸಿದ್ದು, ಇನ್ನೂ ಉಳಿದ ಶಾಲೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಾಲೆಗಳಿಗೆ ಬಂದಿರುವ ಬೆದರಿಕೆ ಸಂದೇಶಗಳು ಆತಂಕಕಾರಿಯಾಗಿದ್ದು, ಪ್ರಚೋದನಕಾರಿ ಭಾಷೆ ಮತ್ತು ಉಗ್ರಗಾಮಿ ಸಂದೇಶಗಳನ್ನು ಹೊಂದಿತ್ತು ಎಂದು ತಿಳಿದುಬಂದಿದೆ. ಇನ್ನು, ಈ ಸಂದೇಶಗಳು ಖಲಿಸ್ತಾನಿ ಪರವಾಗಿವೆ. ಈ ಶಾಲೆಗಳಿಗೆ ಬಂದಿರುವ ಬಾಂಬ್‌ ಬೆದರಿಕೆಗಳಲ್ಲಿ ” ದೆಹಲಿ ಖಲಿಸ್ತಾನ್ ಆಗಲಿದೆ”, “ಖಾಲಿಸ್ತಾನ್ ರಾಷ್ಟ್ರೀಯ ಸೇನೆ” ಎಂದೆಲ್ಲಾ ಉಲ್ಲೇಖವಾಗಿದೆ. ಇಮೇಲ್‌ ಸಂದೇಶಗಳಲ್ಲಿ ದೆಹಲಿಯು ಖಲಿಸ್ತಾನವಾಗಲಿದೆ. ಆಜ್ ಶಹೀದ್ ಅಫ್ಜಲ್ ಗುರುವಿನ ನೆನಪಿನಲ್ಲಿ 1:11ರ ಸಮಯದಲ್ಲಿ ಬಾಂಬ್‌ ಬ್ಲಾಸ್ಟ್‌ ನಡೆಯಲಿದ್ದು, ಇಂದು ಶಾಲೆಗಳಲ್ಲಿ ಧಮಾಕಾ ಆಗಲಿದೆ ಎಂದು ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲ, ಇನ್ನು, ಆಘಾತಕಾರಿ ಎಂಬಂತೆ ಪಾರ್ಲಿಮೆಂಟ್‌ ನಲ್ಲಿಯೂ ಬಾಂಬ್‌ ಬ್ಲಾಸ್ಟ್‌ ಆಗಲಿದೆ ಎಂದು ಬೆದರಿಕೆ ಬಂದಿದ್ದು, ಇದರಲ್ಲಿ ಹಿಂದೂಸ್ತಾನಿಗಳ ಪಾರ್ಲಿಮೆಂಟ್‌ ನಲ್ಲಿ ಫೆ.13ರಂದು ಮಧ್ಯಾಹ್ನ 1:11ರ ಸಮಯಕ್ಕೆ ಬಾಂಬ್‌ ಬ್ಲಾಸ್ಟ್‌ ನಡೆಯಲಿದೆ. ಮೋದಿ-ಶಾ-ಜೈಶಂಕರ್‌ ಖಲಿಸ್ತಾನಿಗಳ ಶತ್ರುಗಳು, ಪಂಜಾಬ್‌ ಖಲಿಸ್ತಾನಿ ಆಗಲಿದೆ – ಖಲಿಸ್ತಾನ್‌ ನ್ಯಾಷನಲ್‌ ಆರ್ಮಿ ಎಂದು ಬರೆಯಲಾಗಿದೆ. ಇದು ದೆಹಲಿಯಲ್ಲಿ ಮತ್ತೆ ಬಾಂಬ್‌ ಭೀತಿಯನ್ನು ಹುಟ್ಟಿಸಿದ್ದು, ರಾಜಧಾನಿಯ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಮುಂದುವರೆದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ನಾಗರಿಕರು ಭಯಭೀತರಾಗದೆ ಕೇವಲ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸುವಂತೆ ಸೂಚಿಸಲಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.