ದೆಹಲಿ ಸ್ಫೋಟ ಪ್ರಕರಣ : ಪ್ರತಿಷ್ಠಿತ ಅಲ್-ಫಲಾಹ್ ವಿಶ್ವವಿದ್ಯಾಲಯದ ಹಾಸ್ಟೆಲ್‌ ಕೊಠಡಿಯಲ್ಲೇ ನಡೆದಿತ್ತು ಪ್ಲ್ಯಾನಿಂಗ್ ?

ಫರಿದಾಬಾದ್ : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ಕಾರು ಬಾಂಬ್ ಸ್ಫೋಟದ ವಿಚಾರವಾಗಿ ಇದೀಗ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವೈದ್ಯರ ಸೋಗಿನಲ್ಲಿದ್ದ ಭಯೋತ್ಪಾದಕರು ತಮ್ಮ ಉಗ್ರ ಕೃತ್ಯಕ್ಕೆ ಹರಿಯಾಣದ ಪ್ರತಿಷ್ಠಿತ ಅಲ್-ಫಲಾಹ್ ವಿಶ್ವವಿದ್ಯಾಲಯದ ಹಾಸ್ಟೆಲ್‌ ಕೊಠಡಿಯನ್ನೇ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇಲ್ಲಿಂದಲೇ ದೇಶದ ಪ್ರಮುಖ ಪ್ರದೇಶದಲ್ಲಿ ಸ್ಫೋಟಕ್ಕೆ ಯೋಜನೆ ರೂಪಿಸುತ್ತಿದ್ದರು ಎನ್ನಲಾಗಿದೆ.

Advertisement

ಅಲ್-ಫಲಾಹ್ ವಿಶ್ವವಿದ್ಯಾಲಯದ ಬಾಲಕರ ಹಾಸ್ಟೆಲ್‌ನಲ್ಲಿರುವ ಕೊಳಕು ಕೊಠಡಿಯಲ್ಲಿ ವೈಟ್‌ ಕಾಲರ್‌ ಭಯೋತ್ಪಾದಕರು ಸ್ಫೋಟಕ್ಕೆ ಸಂಚು ಮಾಡುತ್ತಿದ್ದರು. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸರಣಿ ದಾಳಿಗಳನ್ನು ನಡೆಸಲು ಪ್ರತಿದಿನ ಸಭೆ ಸೇರಿ ಚರ್ಚೆ ನಡೆಸುತ್ತಿದ್ದರು. ಇದು ರಹಸ್ಯ ಸಭೆಗಳ ಸ್ಥಳವಾಗಿತ್ತು ಎನ್ನುವುದು ಹರಿಯಾಣ, ದೆಹಲಿ ಮತ್ತು ಜಮ್ಮು ಕಾಶ್ಮೀರ ಪೊಲೀಸರ ತನಿಖೆಯಿಂದ ಬಯಲಾಗಿದೆ. ಹುಡುಗರ ಹಾಸ್ಟೆಲ್‌ ನ 17ನೇ ಕಟ್ಟಡದಲ್ಲಿರುವ ಕೊಠಡಿ ಸಂಖ್ಯೆ 13, ಕೊಳಕು ಕೊಠಡಿಯಾಗಿತ್ತು. ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್‌ನ ರಹಸ್ಯ ಸಭೆ ನಡೆಸುತ್ತಿದ್ದ ಹಲವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಪತ್ತೆ ಹಚ್ಚಲು ಕೇಂದ್ರ ಪೊಲೀಸ್ ತಂಡ ತನಿಖೆ ಮುಂದುವರೆಸಿದೆ.

ಭಾರತದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮಹಿಳಾ ವಿಭಾಗವನ್ನು ಸ್ಥಾಪಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆ ಡಾ. ಶಹೀನ್ ಶಾಹಿದ್ ಅವರನ್ನು ಬಂಧಿಸಲಾಯಿತು. ಅವರು ಸಹ ಇದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಮುಜಾಮ್ಮಿಲ್ ಮತ್ತು ಜೈಶ್‌ ಮಹಿಳಾ ಸಂಘಟನೆ ಕಟ್ಟಲು ಜವಾಬ್ದಾರಿ ವಹಿಸಿಕೊಂಡಿದ್ದ ಶಾಹೀನ್‌ನನ್ನು ಬಂಧಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾಶ್ಮೀರ ಮೂಲದ ಮತ್ತೊಬ್ಬ ವೈದ್ಯ ನಿಸಾರ್-ಉಲ್-ಹಸನ್ ನಾಪತ್ತೆಯಾಗಿದ್ದಾನೆ. ಹಾಸ್ಟೆಲ್‌ನ ಕೊಠಡಿ ಸಂಖ್ಯೆ 13, ಕಾಶ್ಮೀರದ ಪುಲ್ವಾಮಾ ಮೂಲದ ಡಾ. ಮುಝಮ್ಮಿಲ್‌ಗೆ ಸೇರಿದ್ದಾಗಿತ್ತು. ಇದೇ ಕೊಠಡಿಯೊಳಗೆ ಆತ ವೈದ್ಯರನ್ನು ಭೇಟಿಯಾಗಿ ದೆಹಲಿ ಮತ್ತು ಹತ್ತಿರದ ರಾಜ್ಯಗಳಲ್ಲಿ ಸಂಘಟಿತ ಸ್ಫೋಟಗಳಿಗೆ ಸಂಚು ರೂಪಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕೊಠಡಿ ಸಂಖ್ಯೆ 13 ರ ತನಿಖೆ ವೇಳೆ ರಾಸಾಯನಿಕ ವಸ್ತುಗಳು ಸಹ ಕಂಡುಬಂದಿವೆ. ಈ ರಾಸಾಯನಿಕಗಳನ್ನು ಅಮೋನಿಯಂ ನೈಟ್ರೇಟ್ ಮತ್ತು ಸಣ್ಣ ಪ್ರಮಾಣದ ಲೋಹದ ಆಕ್ಸೈಡ್‌ಗಳೊಂದಿಗೆ ಬೆರೆಸಿ ಸ್ಫೋಟಕಗಳನ್ನು ತಯಾರಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೆಂಪು ಕೋಟೆ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್ ಫ್ಯೂಯಲ್ ಆಯಿಲ್ ಅನ್ನು ಬಳಸಲಾಗಿತ್ತು ಎನ್ನಲಾಗಿದೆ

ಸಮರ್ಥಿಸಿಕೊಂಡ ವಿವಿ

ವೈಟ್‌ ಕಾಲರ್‌ ಉಗ್ರರ ಭಯೋತ್ಪಾದಕ ಜಾಲ ಬಯಲಾದ ಎರಡು ದಿನಗಳ ಬಳಿಕ ಅಲ್-ಫಲಾಹ್ ವಿಶ್ವವಿದ್ಯಾಲಯವು ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದೆ. ವಿಶ್ವವಿದ್ಯಾಲಯದ ಪ್ರಯೋಗಾಲಯಗಳಲ್ಲಿ ಯಾವುದೇ ಅನಧಿಕೃತ ವಸ್ತುಗಳು ಅಥವಾ ರಾಸಾಯನಿಕಗಳನ್ನು ಎಂದಿಗೂ ಬಳಸಲಾಗಿಲ್ಲ ಅಥವಾ ಸಂಗ್ರಹಿಸಲಾಗಿಲ್ಲ ಎಂದು ಅದು ಪ್ರತಿಪಾದಿಸಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.