ಧರ್ಮಸ್ಥಳ : ಪ್ರಸಿದ್ಧ ಪಾವನ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ವೈಭವದ ಲಕ್ಷದೀಪೋತ್ಸವ ಆರಂಭಗೊಂಡಿದೆ. ಇಂದು ಬೆಳಗ್ಗೆ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆಗೊಂಡಿದೆ. ವಸ್ತುಪ್ರದರ್ಶನದಲ್ಲಿ ನೂರಾರು ಮಳಿಗೆಗಳು ಇದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ. ಇಂದು “ಹೊಸಕಟ್ಟೆ ಉತ್ಸವ” ಹಾಗೂ ವಸ್ತುಪ್ರದರ್ಶನ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಸಂಜೆ 06:00 ಗಂಟೆಯಿಂದ 06:55 ರವರೆಗೆ ಶ್ರೀ ಸರ್ವೇಶ ದೇವಸ್ಥಳಿ ಉಜಿರೆ ಮತ್ತು ಸಹ ಕಲಾವಿದರಿಂದ ಭಕ್ತಿರಸಾಂಜಲಿ, ರಾತ್ರಿ ಗಂಟೆ 07:00 ರಿಂದ 07:55ರವರೆಗೆ ಕು.ಮೇಘನಾ ವರದರಾಜು, ಬೆಂಗಳೂರು ಅವರಿಂದ ನೃತ್ಯ ನಿವೇದನಮ್, ರಾತ್ರಿ ಗಂಟೆ 08:00 ರಿಂದ 08:45ರವರೆಗೆ ಶ್ರೀ ಲೋಲಾಕ್ಷ ಮತ್ತು ಬಳಗ ಕಿನ್ನಿಗೋಳಿ ಇವರಿಂದ ಜಾದೂ ಪ್ರದರ್ಶನ, ರಾತ್ರಿ ಗಂಟೆ 08:50 ರಿಂದ 09:45ರವರೆಗೆ ವಿದ್ವಾನ್ ಸುಬ್ರಹ್ಮಣ್ಯ ನಾವಡ, ಶ್ರೀ ನೃತ್ಯಾಲಯ(ರಿ.) ಕಾರ್ಕಳ ಇವರಿಂದ ನೃತ್ಯರೂಪಕ ಹಾಗೂ ರಾತ್ರಿ ಗಂಟೆ 09:50ರಿಂದ 11:00 ಗಂಟೆಯವರೆಗೆ ಎಸ್ ಡಿ ಎಂ ಕಾಲೇಜು ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಎಂಬ ಯಕ್ಷಗಾನವು ನಡೆಯಲಿದೆ.

