ಬೆಂಗಳೂರು : ಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿ ವಾಮಾಚಾರ, ಕೋಳಿ ಬಲಿ, ಯಾರ ಕೈವಾಡ ?- ತನಿಖೆಗೆ ಇಳಿದ ಖಾಕಿ ಪಡೆ!

ಬೆಂಗಳೂರು, ಜೂ. 9 : ಡಿಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೆ ದಿನಗಳಲ್ಲಿ, ಸಿಎಂ ಆಗಿದ್ದನ್ನು ಸಹಿಸಿಕೊಳ್ಳದವರು, ವಾಮಾಚಾರವನ್ನು ಪ್ರಯೋಗಿಸಿದರೇ ಎನ್ನುವ ಬಲವಾದ ಅನುಮಾನಗಳು ಮೂಡುತ್ತಿದೆ. ಎರಡು ದಿನಗಳ ಹಿಂದೆ, ಸಿಎಂ ಅವರ ಸದಾಶಿವನಗರ ನಿವಾಸದ ಬಳಿ, ಕೋಳಿಯ ತಲೆ, ನಿಂಬೆಹಣ್ಣು ಪತ್ತೆಯಾಗಿದೆ ಎಂದು ವರದಿಯಾಗಿದೆ.

Advertisement

ಅಪಾರ ದೈವಭಕ್ತರಾದ ಸಿಎಂ ಡಿಕೆ ಶಿವಕುಮಾರ್ ಅವರು, ನೊಣವಿನಕೆರೆ ಅಜ್ಜಯ್ಯನ ಅಣತಿಯಂತೆಯೇ ನಡೆಯುವವರು ಎಂದು ಹಲವು ಬಾರಿ ಅವರೇ ಹೇಳಿದ್ದುಂಟು. ಹೀಗಿರುವಾಗ, ಅವರಿಗೆ ಇಂತಹ ಮಾಟಮಂತ್ರ ಏನೂ ತಟ್ಟುವುದಿಲ್ಲ ಎನ್ನುವುದು ಅಭಿಮಾನಿಗಳ ವಿಶ್ವಾಸದ ಮಾತಾಗಿದೆ.

ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ


ಕಳೆದ ಬುಧವಾರದಂದು (ಜೂನ್ 3) ಡಿಕೆ ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು. ಇದಕ್ಕೂ ಮುನ್ನ, ವಿವಿಧ ಮಠಾಧೀಶರ ಆಶೀರ್ವಾದವನ್ನೂ ಡಿಕೆಶಿ ಪಡೆದಿದ್ದರು. ಪ್ರಮಾಣವಚನಕ್ಕೂ ಮುನ್ನ ಅಜ್ಜಯ್ಯನ ಫೋಟೋಗೆ ಪುಷ್ಪ ನಮನ ಸಲ್ಲಿಸಿದ್ದರು. ಸಾಂಪ್ರದಾಯಿಕವಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ, ಡಿಕೆಶಿಯವರಂತಹ ದೈವಭಕ್ತ ಕುಟುಂಬದವರಿಗೆ ಮಾಟಮಂತ್ರ ಏನೂ ಮಾಡದು ಎನ್ನುವುದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಸಿಎಂ ಸದಾಶಿವನಗರದ ಬಳಿ ಮಾಟಮಂತ್ರ ಪ್ರಯೋಗಿಸಿದವರು ಯಾರು?


ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಖಾಸಗಿ ನಿವಾಸದ (ಸದಾಶಿವನಗರ) ಬಳಿ, ಕೋಳಿಯ ತಲೆ ಮತ್ತು ಮೂರು ನಿಂಬೆಹಣ್ಣು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಈ ವಿಚಾರಕ್ಕೆ ಸಂಬಂಧಿಸಿದಂತೆ, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ. ಇದು, ಎರಡು ದಿನಗಳ ಹಿಂದಿನ ವಿದ್ಯಮಾನವಾಗಿದ್ದು, ಮುಖ್ಯಮಂತ್ರಿಗಳ ನಿವಾಸದ ಬಳಿಯೇ ಯಾವ ಕಾರಣಕ್ಕಾಗಿ, ಕೋಳಿ ಬಲಿ ನಡೆದಿದೆ, ಇದರ ಹಿಂದೆ ಯಾರಿರಬಹುದು, ಇದರ ಹಿಂದಿನ ಉದ್ದೇಶವೇನು ಎನ್ನುವುದನ್ನು ಅರಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಡಿಕೆಶಿ ಮೇಲೆ ವಾಮಾಚಾರ ನಡೆದಿರಬಹುದೇ ಎನ್ನುವ ಸಂಶಯ


ಮುಖ್ಯಮಂತ್ರಿಗಳ ನಿವಾಸದ ಬಳಿ ಮೂರು ರಸ್ತೆ ಸೇರುವ ಬಳಿ ಕೋಳಿ ಬಲಿಯನ್ನು ನೀಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಪೊಲೀಸರು ಸತ್ತ ಕೋಳಿ ಮತ್ತು ನಿಂಬೆಹಣ್ಣನ್ನು ತೆರವುಗೊಳಿಸಿದ್ದಾರೆ. ಡಿಕೆಶಿಯವರದ್ದು, ದೈವಭಕ್ತ ಮತ್ತು ಸಾಂಪ್ರದಾಯಿಕವಾಗಿ ಬದುಕುವ ಕುಟುಂಬವಾಗಿದೆ. ಹಾಗಾಗಿ, ಅವರಿಗೆ ಇಂತಹ ವಾಮಾಚಾರ ಪ್ರಯೋಗ ನಡೆದಿರುವ ಸಾಧ್ಯತೆ ಕಮ್ಮಿ, ಒಂದು ವೇಳೆ, ಅವರನ್ನೇ ಟಾರ್ಗೆಟ್ ಮಾಡಿ, ಮಾಟ ಮಾಡಿದ್ದರೂ, ಅದು ಅವರಿಗೆ ಅದು ತಾಟದು ಎನ್ನುವುದು ಅವರ ಅಭಿಮಾನಿಗಳ ವಿಶ್ವಾಸದ ಮಾತಾಗಿದೆ.

ಜೂನ್ ಮೂರರಂದು ಸಿಎಂ ಆಗಿ ಡಿಕೆಶಿ ಪ್ರಮಾಣವಚನ

ಅಧಿಕಾರ ಹಸ್ತಾಂತರದ ವಿಚಾರ, ಹಲವು ತಿಂಗಳಿನಿಂದ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ದಿನಕ್ಕೊಂದು ತಿರುವನ್ನು ಪಡೆಯುತ್ತಿತ್ತು. ಆ ಚುನಾವಣೆ, ಈ ಚುನಾವಣೆ ಎಂದು ಕೊಂಡು, ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಂದೂಡುತ್ತಲೇ ಬರುತ್ತಿತ್ತು. ಕೊನೆಗೂ, ಡಿಕೆ ಶಿವಕುಮಾರ್ ಅವರ ಬಹುದಿನದ ಕನಸು, ಜೂನ್ ಮೂರರಂದು ಕೂಡಿಬಂದಿತ್ತು. ಲೋಕಭವನದ ಗಾಜಿನ ಮನೆಯಲ್ಲಿ ಕಿಕ್ಕಿರಿದು ತುಂಬಿದ ಜನರ ಮಧ್ಯೆ, ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.