ಧರ್ಮಸ್ಥಳ : ನಾಡಿನ ಸುಪ್ರಸಿದ್ಧ ಯಾತ್ರಾಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಪನ್ನಗೊಂಡಿದೆ. ಬೆಳ್ಳಿ ರಥದಲ್ಲಿ ವಿರಾಜಮಾನನಾದ ಭಗವಾನ್ ಶ್ರೀ ಮಂಜುನಾಥನ ಕಾಣಲು ಸಾಗರೋಪಾದಿ ಸಂಖ್ಯೆಯಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು. ಶ್ರೀ ಕ್ಷೇತ್ರದ ರಥ ಬೀದಿಯಲ್ಲಿ ಬೆಳ್ಳಿ ರಥದಲ್ಲಿ ಸಾಗಿ ಬಂದ ಶ್ರೀ ಮಂಜುನಾಥನಿಗೆ ಗೌರಿಮಾರು ಕಟ್ಟೆಯಲ್ಲಿ ಉತ್ಸವ ನಡೆಯುವ ಮೂಲಕ 2025ರ ಲಕ್ಷದೀಪ ಸಂಪನ್ನಗೊಂಡಿದೆ.


ಲಕ್ಷ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಗಣ ಭಗವಾನ್ ಮಂಜುನಾಥನ ಕಣ್ತುಂಬಿಕೊಂಡು, ಭಕ್ತಿಯಿಂದ ತಲೆಭಾಗಿ ಪುನೀತರಾದರು. ಈ ಭವ್ಯ ಬೆಳ್ಳಿ ರಥೋತ್ಸವದಲ್ಲಿ ನೂರಾರು ವಾದ್ಯ, ಚೆಂಡೆ, ಸಾಂಸ್ಕೃತಿಕ ತಂಡಗಳು ರಥೋತ್ಸವದ ಮೆರುಗನ್ನು ಹೆಚ್ಚಿಸಿತ್ತು. ಶ್ರೀ ಮಂಜುನಾಥನ ನಂದಿಯೆಂದೆ ಕರೆಯಲ್ಪಡುವ ಶ್ರೀ ಕ್ಷೇತ್ರದ ಬಸವನ ದೈವ ಭಕ್ತಿ ಕಂಡು, ಭಕ್ತರು ನಿಬ್ಬೆರಗಾದರು.

