ಕಾಸರಗೋಡು : ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಉಳಿಯತ್ತಡ್ಕದ ಭರತರಾಜ್ ಕೆ ಗಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ನವದೆಹಲಿಯ ವರ್ಲ್ಡ್ ಕಲ್ಟರ್ ಆಂಡ್ ಎನ್ವಿರೊಲ್ಕೆಂಟ್ ಪ್ರೊಟೆಕ್ಷನ್ ಕಮಿಶನ್ ಸಂಸ್ಥೆಯು ಭರತರಾಜ್ ಅವರ ಸಮಾಜ ಸೇವೆ ಮತ್ತು ಆಡಳಿತ ನಿರ್ವಹಣೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿದೆ. ನ. 14 ರಂದು ನವದೆಹಲಿಯಲ್ಲಿ ನಡೆದ ವಿಶೇಷ ಘಟಿಕೋತ್ಸವದಲ್ಲಿ ಪ್ರತಿಷ್ಟಿತ ಗೌರವ ಪ್ರದಾನ ಮಾಡಿ ಗೌರವಿಸಲಾಗಿದೆ. ಮಧೂರು ಪಂಚಾಯತಿನ ಹೃದಯಸ್ಥಾನ ಉಳಿಯತ್ತಡ್ಕಕ್ಕೆ ಇದೇ ಮೊದಲ ಬಾರಿ ಗೌರವ ಡಾಕ್ಟರೇಟ್ ಒಲಿದು ಬಂದಿದ್ದು, ಆ ಕಾರಣಕ್ಕಾಗಿ ಭರತ್ ಗಟ್ಟಿಯವರಿಗೆ ಅವರ ಆಪ್ತರು, ಅಪಾರ ಅಭಿಮಾನಿಗಳು ವಿಶೇಷ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸದಾ ಸಕ್ರೀಯವಾಗಿರುವ ಇವರು ಕೋವಿಡ್ ಸಮಯದಲ್ಲೂ ಇವರು ಎಷ್ಟೋ ಜನರ ಬಾಳಿಗೆ ಬೆಳಕಾದವರು ಹಾಗೂ ಮಳೆಗಾಲದ ಸಮಯಲ್ಲಿ ಕೆಲವು ಕಡೆ ಮನೆಗಳು ಹಾನಿಗೊಳಗಾಗಿದ್ದು ತಕ್ಷಣ ಸ್ಪಂದಿಸಿದ ಇವರು ಮನೆಯನ್ನು ಪುನರ್ ನಿರ್ಮಾಣ ಮಾಡುವ ಮಹತ್ಕಾರ್ಯವನ್ನು ಮಾಡಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಇಂದಿಗೂ ಭರತ್ ರಾಜ್ ರವರು ಸಾಮನ್ಯರಂತೆ ಎಲ್ಲರ ಜೊತೆಗೆ ನಿಲ್ಲುವ ವ್ಯಕ್ತಿತ್ವ ಅವರದ್ದು.

