ಭರತರಾಜ್ ಗಟ್ಟಿಯವರಿಗೆ ಗೌರವ ಡಾಕ್ಟರೇಟ್.

ಕಾಸರಗೋಡು : ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಉಳಿಯತ್ತಡ್ಕದ ಭರತರಾಜ್ ಕೆ ಗಟ್ಟಿಯವರು ಗೌರವ ಡಾಕ್ಟರೇಟ್ ಗೆ ಆಯ್ಕೆಯಾಗಿದ್ದಾರೆ.

Advertisement

ನವದೆಹಲಿಯ ವರ್ಲ್ಡ್ ಕಲ್ಟರ್ ಆಂಡ್ ಎನ್ವಿರೊಲ್ಕೆಂಟ್ ಪ್ರೊಟೆಕ್ಷನ್ ಕಮಿಶನ್ ಸಂಸ್ಥೆಯು ಭರತರಾಜ್ ಅವರ ಸಮಾಜ ಸೇವೆ ಮತ್ತು ಆಡಳಿತ ನಿರ್ವಹಣೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪ್ರಕಟಿಸಿದೆ. ಈ ತಿಂಗಳ 14 ರಂದು ನವದೆಹಲಿಯಲ್ಲಿ ನಡೆಯಲಿರುವ ವಿಶೇಷ ಘಟಿಕೋತ್ಸವದಲ್ಲಿ ಈ ಪ್ರತಿಷ್ಟಿತ ಗೌರವ ಪ್ರದಾನವಾಗಲಿದೆ. ಭರತರಾಜ್ ಗಟ್ಟಿಯವರು ನಾಳೆ ಮದ್ಯಾಹ್ನ 12. 20 ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನದಲ್ಲಿ ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಮಧೂರು ಪಂಚಾಯತಿನ ಹೃದಯಸ್ಥಾನ ಉಳಿಯತ್ತಡ್ಕಕ್ಕೆ ಇದೇ ಮೊದಲ ಬಾರಿ ಗೌರವ ಡಾಕ್ಟರೇಟ್ ಒಲಿದು ಬರುತ್ತಿದ್ದು ಆ ಕಾರಣಕ್ಕಾಗಿ ಭರತ್ ಗಟ್ಟಿಯವರಿಗೆ ಅವರ ಆಪ್ತರು, ಅಭಿಮಾನಿಗಳು ವಿಶೇಷ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸದಾ ಸಕ್ರೀಯವಾಗಿರುವ ಇವರು ಕೋವಿಡ್ ಸಮಯದಲ್ಲೂ ಇವರು ಎಷ್ಟೋ ಜನರ ಬಾಳಿಗೆ ಬೆಳಕಾದವರು ಹಾಗೂ ಮಳೆಗಾಲದ ಸಮಯಲ್ಲಿ ಕೆಲವು ಕಡೆ ಮನೆಗಳು ಹಾನಿಗೊಳಗಾಗಿದ್ದು ತಕ್ಷಣ ಸ್ಪಂದಿಸಿದ ಇವರು ಮನೆಯನ್ನು ಪುನರ್ ನಿರ್ಮಾಣ ಮಾಡುವ ಮಹತ್ಕಾರ್ಯವನ್ನು ಮಾಡಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಇಂದಿಗೂ ಭರತ್ ರಾಜ್ ರವರು ಸಾಮನ್ಯರಂತೆ ಎಲ್ಲರ ಜೊತೆಗೆ ನಿಲ್ಲುವ ವ್ಯಕ್ತಿತ್ವ ಅವರದ್ದು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.