ಬೆಂಗಳೂರು, ಜ. 02 : ಹೊಸ ವರ್ಷಾಚರಣೆ ಮತ್ತು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟವು ಹೊಸ ದಾಖಲೆಯನ್ನೇ ಬರೆದಿದೆ. ಕಳೆದ ಒಂಬತ್ತು ದಿನಗಳಲ್ಲಿ ಅಬಕಾರಿ ಇಲಾಖೆಗೆ 1,319.11 ಕೋಟಿ ರೂಪಾಯಿ ಆದಾಯ ಬಂದಿದೆ. ಇದು ಕಳೆದ ವರ್ಷಕ್ಕಿಂತ ಶೇ.10.19ರಷ್ಟು ಹೆಚ್ಚಳವಾಗಿದೆ. ಕೊನೆಯ ಮೂರು ದಿನಗಳಲ್ಲಿ 587 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಅಬಕಾರಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10.19ರಷ್ಟು ಹೆಚ್ಚಳ ಕಂಡು ಬಂದಿದೆ. ಕೊನೆಯ ಮೂರು ದಿನಗಳಲ್ಲಿ(ಡಿ.29, 30, 31ರಂದು) 587 ಕೋಟಿ ರೂ. ಆದಾಯ ಹರಿದು ಬಂದಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ವರ್ಷಾಂತ್ಯದಲ್ಲಿ ಮದ್ಯದ ವಹಿವಾಟು ಸಾರ್ವಕಾಲಿಕ ದಾಖಲೆ ಬರೆದಿದೆ. ಡಿಸೆಂಬರ್ ಆರಂಭದಿಂದಲೂ ಪ್ರವಾಸ, ಪಾರ್ಟಿಯ ಗುಂಗಿನಲ್ಲಿದ್ದ ಗುಂಡು ಪ್ರಿಯರು ಮದಿರೆಯಲ್ಲಿಮಿಂದೆದ್ದಿದ್ದಾರೆ.
ಬಹುತೇಕರು ಮದ್ಯದ ನಶೆಯಲ್ಲಿ ಹೊಸ ವರ್ಷ ಸ್ವಾಗತಿಸುವುದು ವಾಡಿಕೆ. ಮದ್ಯ ಇಲ್ಲವೆಂದರೆ ಹೊಸ ವರ್ಷಾಚರಣೆ ನಡೆಯೋದೆ ಇಲ್ಲಎನ್ನುವಂತಾಗಿದೆ. ರಾಜ್ಯದೆಲ್ಲೆಡೆ ಬಿಯರ್ ಹಾಗೂ ದೇಶೀಯ ಮದ್ಯದ (ಐಎಂಎಲ್) ಮಾರಾಟ ಭರ್ಜರಿಯಾಗಿ ನಡೆದಿದೆ. ರಾಜ್ಯದಲ್ಲಿಸಾಮಾನ್ಯ ದಿನಗಳಲ್ಲಿಮದ್ಯ ಮಾರಾಟದಿಂದ ಸರಕಾರಕ್ಕೆ 65ರಿಂದ 70 ಕೋಟಿ ರೂ. ಆದಾಯ ಬರುತ್ತದೆ. ಆದರೆ, ಡಿ.23ರಿಂದ 31ರವರೆಗೆ ನಡೆದಿರುವ ಮದ್ಯದ ವಹಿವಾಟು ಇಲಾಖೆಯ ಹಿಂದಿನ ಎಲ್ಲಾದಾಖಲೆಗಳನ್ನು ಮುರಿದಿದ್ದು, ಜ.30ರಂದು ಒಂದೇ 261 ಕೋಟಿ ರೂ. ಆದಾಯ ಬಂದಿದೆ.
ವರ್ಷಾಂತ್ಯದ 9 ದಿನಗಳ ಅವಧಿಯಲ್ಲಿ22.59 ಲಕ್ಷ ಬಾಕ್ಸ್ ಐಎಂಎಲ್ ಮತ್ತು 15.27 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಅಂದರೆ, ಐಎಂಎಲ್ ಮತ್ತು ಬಿಯರ್ ಸೇರಿ 1,668.99 ಕೋಟಿ ರೂ. ಮೌಲ್ಯದ ಮದ್ಯ ಬಿಕರಿಯಾಗಿದ್ದು, ಸರಕಾರಕ್ಕೆ 587 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷದ ಮೂರು ದಿನಗಳಿಗೆ ಹೋಲಿಸಿದರೆ ಶೇ.166.74ರಷ್ಟು ಏರಿಕೆಯಾಗಿದೆ. ಒಟ್ಟಾರೆ ಡಿಸೆಂಬರ್ ತಿಂಗಳಲ್ಲಿ63.71 ಲಕ್ಷ ಪೆಟ್ಟಿಗೆ ಐಎಂಎಲ್ ಮತ್ತು 36.14 ಲಕ್ಷ ಪೆಟ್ಟಿಗೆ ಬಿಯರ್ ಅಂದರೆ 4,425.16 ಕೋಟಿ ರೂ. ಮೌಲ್ಯದ ಮದ್ಯದ ವಹಿವಾಟು ನಡೆದಿದೆ. ಇದರಿಂದ ಡಿಸೆಂಬರ್ ತಿಂಗಳೊಂದರಲ್ಲೇ ಅಬಕಾರಿ ಇಲಾಖೆಗೆ 3,559.08 ಕೋಟಿ ರೂ. ಆದಾಯ ಹರಿದು ಬಂದಿದ್ದು, 2024ರ ಡಿಸೆಂಬರ್ ತಿಂಗಳಿಗೆ ಹೋಲಿಕೆ ಮಾಡಿದರೆ 454.58 ಕೋಟಿ ರೂ. ಆದಾಯ ಹೆಚ್ಚಳವಾಗಿದೆ.

