ದುಬೈ : ಕೊಡಗು ಮತ್ತು ದಕ್ಷಿಣಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮ

Advertisement

ದುಬೈ : ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮವು ನವೆಂಬರ್ 16 ಆದಿತ್ಯವಾರ ದುಬೈಯ ಆಶೀಯಾನ ಫಾರ್ಮ್ ಹೌಸ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರಗಿತು. ಬೆಳಗ್ಗೆ 9 ರಿಂದ ಆರಂಭವಾದ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ಉದ್ಯಮಿಗಳಿಗೆ ಸನ್ಮಾನಿಸಿ ಗೌರವಿಸಿಲಾಯಿತು.

Advertisement

ಇದೇ ಸಂದರ್ಭದಲ್ಲಿ ಸಮಾಜದ ಸದಸ್ಯರು ಗಳಿಗೆ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟವನ್ನು ಏರ್ಪಡಿಸಲಾಯಿತು. ಸಮ್ಮೇಳನದ ಮುಖ್ಯ ಆಯೋಜಕರಾಗಿ ಹರೀಶ್ ಕೋಡಿ, ಸುರೇಶ್ ಕುಂಪಲ, ಸುನಿಲ್ ಮೊಟ್ಟೆ ಮನೆ, ತೇಜ ಕುಮಾರ್ ಕೊರಂಬಡ್ಕ, ಮೋಹನ್ ಕಡಂಬಳ, ದಿಲೀಪ್ ಉಳುವಾರ, ಶರತ್ ಚೋಕ್ಕಾಡಿ, ರೋಶನ್ ಕಂಪ, ಸುಪ್ರೀತ್ ಕುಂಡಡ್ಕ, ಜೀವನ್ ಗೌಡ ಕುಂಜತಾಡಿ, ಯತೀಶ್ ಗೌಡ, ರತೀಶ್ ಬಗ್ಗನ ಮನೆ, ಆಶೀಶ್ ಕೋಡಿ, ಮೀನಾ ಹರೀಶ್ ಕೋಡಿ, ಪುಲೋಮ ಮಹೇಂದ್ರ ಕೊಳಂಬೆ, ಹಾಗೂ ಇತರ ಸದಸ್ಯರು ಶ್ರಮಿಸಿದ್ದರು. ಯು ಎ ಇ ಯ ವಿವಿಧ ಎಮಿರೇಟ್ಸ್ನಲ್ಲಿ ನೆಲೆಸಿರುವ ಸುಮಾರು 300ಕ್ಕೂ ಮಿಕ್ಕಿದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಬಾಂಧವರು ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭ ದ ಅಧ್ಯಕ್ಷತೆಯನ್ನು ಶ್ರೀಯುತ ಹೊದ್ದೆಟ್ಟಿ ರಾಮಚಂದ್ರ ವಹಿಸಿ ಕೊಂಡಿದ್ದು, ಮುಖ್ಯ ಅತಿಥಿಯಾಗಿ ಶ್ರೀಯುತ ಮುಕ್ಕಾಟಿ ಕಿಶೋರ್ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ನಿತಿನ್ ದೊರ್ತೋಡಿ ಸಾರಥ್ಯದೊಂದಿಗೆ ಯುವ ನಿರೂಪಕಿ ಶ್ರಾವ್ಯ ಗೌಡ ಹಾಗೂ ರಕ್ಷಿತಾ ಸುಪ್ರೀತ್ ನೆರವೇರಿಸಿದರು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ