ಗುರುವಾಯನಕೆರೆ : ಎಕ್ಸೆಲ್ ಅಕ್ಷರೋತ್ಸವ – 2025 ಹಾಗೂ ಎಕ್ಸೆಲ್ ಪರ್ಬ – 2025 ಅಂಗವಾಗಿ ಇಂದು ಕಾಲೇಜು ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸಾಧನೆಗೈದಂತಹ ವಿದ್ಯಾರ್ಥಿಗಳಿಗೆ ಬೆಳಗಾವಿಯ ಶ್ರೀ ನಿಡುಸೋಸಿ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿಗಳು ಪ್ರತಿಭಾ ಪುರಸ್ಕಾರಗೈದು ವಿದ್ಯಾರ್ಥಿಗಳನ್ನು ಗೌರವಿಸಿದರು.


ಕಾರ್ಯಕ್ರಮದಲ್ಲಿ ಬೆಳಗಾವಿಯ ಶ್ರೀ ನಿಡುಸೋಸೊ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿಗಳು ಆಶಿರ್ವಚನಗೈದು, 2047ರಲ್ಲಿ ಭಾರತವು ಶ್ರೇಷ್ಠ ಭಾರತವಾಗಿ ನಿರ್ಮಾಣಗೊಳ್ಳುತ್ತದೆ. ಅದರ ನಿರ್ಮಾಣಕರ್ತರು ಇಂದಿನ ಯುವ ಜನಾಂಗವೇ ಆಗಿದೆ. ಈ ಜಗತ್ತಿನಲ್ಲಿ ಮುಂದಿನ ಶತಮಾನ ಎನ್ನುವುದು ಇದ್ದರೆ ಅದು ಕೃಷಿಯಿಂದ ಮಾತ್ರ ಸಾಧ್ಯವಾಗುತ್ತದೆ. ಹೀಗಾಗಿ ನಾವುಗಳು ಕೃಷಿಯತ್ತವೂ ಕೂಡಾ ಒಲವು ತೋರಿಸಬೇಕಾಗುತ್ತದೆ ಎಂದರು. ಶಿಕ್ಷಣ ಅನ್ನುವುದು ಉದ್ಯೋಗವನ್ನು ಅರಸಿಕೊಂಡು ಹೋಗುವಂತಿರಬಾರದು, ಬದಲಾಗಿ ಉದ್ಯಮವನ್ನು ಸೃಷ್ಟಿಸುವಂತಾಗಿರಬೇಕಾಗಿದೆ. 2047ರಲ್ಲಿ ಭಾರತದ ಎಕಾನಮಿಯು 36 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಏರುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು, ಎಕ್ಸೆಲ್ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮಾತು ಮುಂದುವರಿಸಿದ ಅವರು, ಕೇವಲ ೫ ವರ್ಷಗಳಲ್ಲಿ 5,000 ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸವನ್ನು ನೀಡಬೇಕೆಂದರೆ ಅದು ಸುಮಂತ್ ಕುಮಾರ್ ಜೈನ್ ಅವರ ಬಹುದೊಡ್ಡ ಸಾಧನೆಯಾಗಿದೆ ಎಂದರು.

ವೇದಿಕೆಯಲ್ಲಿ ಬೆಳ್ತಂಗಡಿ ಹೋಲಿ ರೆಡಿಮೇರ್ ಆಂಗ್ಲಮಾದ್ಯಮ ಶಾಲೆಯ ಮುಖ್ಯೋಪಾದ್ಯಯರಾದ ರೆ. ಫಾ. ಕ್ಲಿಫರ್ಡ್ ಸಿಮೋನ್ ಪಿಂಟೋ, ರಾಜ್ಯ ಮಟ್ಟದ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಹಾಗೂ ಬೆಳ್ತಂಗಡಿ ವಾಣಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಯರಾದ ಲಕ್ಷ್ಮೀ ನಾರಾಯಣ ಕೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಮತಿ ತಾರಾ ಕೇಸರಿ, ಪತ್ರಕರ್ತರಾದ ರಾಘವ ಶರ್ಮಾ, ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಚಾರ್ಯರಾದ ಡಾ. ನವೀನ್ ಕುಮಾರ್, ಡಾ. ಪ್ರಜ್ವಲ್ ಎಂ. ಉಪಸ್ಥಿತರಿದ್ದರು.

