ಗುರುವಾಯನಕೆರೆ : ಎಕ್ಸೆಲ್ ಕನಸುಗಳ ಹಾರಾಟಕ್ಕೆ ರೆಕ್ಕೆಯಾಗುತ್ತದೆ – ಕೆ. ರಾಜೇಂದ್ರ ಭಟ್

ಗುರುವಾಯನಕೆರೆ, ಜು. 5 : “ಎಕ್ಸೆಲ್ ಪದವಿಪೂರ್ವ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತು ಆತ್ಮಶಕ್ತಿಯ ಮೂಲಕ ಮುನ್ನಡೆದರೆ ಸಾಧನೆಗೆ  ಮೊದಲಿಗರಾಗಬಹುದು ಸಾಧನೆಯ ಕನಸನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಎಕ್ಸೆಲ್ ಪಿಯು ಕಾಲೇಜ್ ರೆಕ್ಕೆಯಾಗಬಲ್ಲದು ಎಂದು ಸಂಪನ್ಮೂಲ ವ್ಯಕ್ತಿಗಳು, ರಾಷ್ಟ್ರ ಮಟ್ಟದ ಜೆ ಸಿ ತರಬೇತುದಾರರು ಹಾಗೂ  ಖ್ಯಾತ ವಾಗ್ಮಿಗಳಾದ  ಶ್ರೀ ಕೆ. ರಾಜೇಂದ್ರ ಭಟ್ ತಿಳಿಸಿದರು.

Advertisement

ಎಕ್ಸೆಲ್ ಪಿ ಯು ಕಾಲೇಜು ಗುರುವಾಯನಕೆರೆ, ಇಲ್ಲಿ ನಡೆದ ಶೃಂಗ ಶೈಕ್ಷಣಿಕ ಸಾಧಕರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸುವುದು, ತಮ್ಮ ಸಾಮರ್ಥ್ಯದ ಅರಿವು, ಆಲಿಸುವ ಸಾಮರ್ಥ್ಯ, ಓದುಗಾರಿಕೆ, ಸಮಯ ಪಾಲನೆ, ಉತ್ತಮ ಕನಸುಗಳು, ಪ್ರಾರ್ಥನೆ, ಆಶೀರ್ವಾದ ,ನಾಯಕತ್ವದ ಗುಣಗಳು, ಬೆಳವಣಿಗೆ ,ಕಲಿಕೆ, ನಿರ್ವಹಣೆ ,ಮೇಲ್ವಿಚಾರಣೆ ,ಒತ್ತಡ ನಿರ್ವಹಣೆ ಇತ್ಯಾದಿ ಗುಣಗಳನ್ನ ಅಳವಡಿಸಿಕೊಂಡರೆ ಸಾಧನೆಗಳೆಲ್ಲವೂ ಸುಲಭವಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರತಿನಿತ್ಯವೂ ಪಾಲಿಸಬೇಕಾದಂತಹ ಅನೇಕ ಮೌಲ್ಯ ಮತ್ತು ಗುಣಗಳನ್ನು ಜಗತ್ತಿನ ಅನೇಕ ಸಾಧಕರ ಜೀವನ ಚರಿತ್ರೆಯನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ವಿದ್ಯಾರ್ಥಿಗಳು ಮತ್ತು ಪೋಷಕರ ನಂಬಿಕೆಗಳಿಸಿರುವ ಎಕ್ಸೆಲ್ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಕಲಿಕೆಯ ತಾಣವೆನಿಸಿದೆ. ಎಕ್ಸೆಲ್ ಸಂಸ್ಥೆಯ ನಿರ್ಮಾತೃ ಶ್ರೀ ಸುಮಂತ್ ಕುಮಾರ್ ಜೈನ್ ರವರು ಒಬ್ಬ ಕನಸುಗಾರರಾಗಿದ್ದು ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕೌಶಲ್ಯವನ್ನು ಅವರು ಅರಿತಿದ್ದಾರೆ. ಆದ್ದರಿಂದಲೇ ಎಕ್ಸೆಲ್ ಪಿಯು ಕಾಲೇಜ್ ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುತ್ತಾ ಬಂದಿದೆ ಎಂದು ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷರಾದ ಶ್ರೀ ಸುಮಂತ್ ಕುಮಾರ್ ಅವರ ಶೈಕ್ಷಣಿಕ ಕಾರ್ಯವನ್ನು ಪ್ರಶಂಸಿದ್ದರು.

ಇದೇ ಸಂದರ್ಭದಲ್ಲಿ ಮಂಗಳೂರಿನ ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿಯು ಎಕ್ಸೆಲ್‌ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ೨೦೨೬ನೇ ಸಾಲಿನ ವಿದ್ಯಾ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

“ಪ್ರಶಸ್ತಿಗಳು ತಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ನನ್ನ ಕನಸುಗಳಿಗೆ ಬೆಂಬಲವಾಗಿ ನಿಂತಿರುವವರು ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಮತ್ತು ಬೋಧಕೇತನ ಸಿಬ್ಬಂದಿಯವರು. ಎಲ್ಲರ ಸಹಕಾರದಿಂದ ನಾನು ಮತ್ತಷ್ಟು  ನಿಸ್ವಾರ್ಥ ಸೇವೆಯನ್ನು ಮಾಡುತ್ತೇನೆ” ಎಂದು ಶ್ರೀ ಸುಮಂತ್ ಕುಮಾರ್ ಜೈನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಈ ಸುಂದರ ಕಾರ್ಯಕ್ರಮಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡುವ ಮೂಲಕ ಚಾಲನೆ ನೀಡಿದರು. ಪ್ರಾಚಾರ್ಯರಾದ ಡಾ.ಶ್ರೀ ಪ್ರಜ್ವಲ್ ಸ್ವಾಗತಿಸಿದರೆ ಉಪ ಪ್ರಾಚಾರ್ಯರಾದ ಶ್ರೀ ಹರೀಶ್ ರವರು ವಂದಿಸಿದರು.
ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಪ್ರಸನ್ನ ಭೋಜ, ಅರುಣ್ ಕ್ರಾಸ್ಟೋಲಿನ್ , ಅನನ್ಯ ಜೈನ್ ಮತ್ತು ಕನ್ನಡ ಉಪನ್ಯಾಸಕರಾದ ಮೊಹಮ್ಮದ್ ಮುನೀರ್ ಅವರು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಶ್ರೀ ನವೀನ್ ಕುಮಾರ್ ಮರಿಕೆ, ಉಪಪ್ರಾಚಾರ್ಯರ ಶ್ರೀ ರೋಹಿತ್ ಕುಮಾರ್, ಕೀರ್ತಿನಿಧಿ ಜೈನ್, ಸಂಯೋಜಕರಾದ ನಿಶಾ ಪೂಜಾರಿ, ಶ್ರೀನಿಧಿ, ನಿಲಯ ಮೇಲ್ವಿಚಾರಕರಾದ ಮಲ್ಲೇಶ್ ಜೈನ್, ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು, ಪೋಷಕರು ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.