ಬೆಳ್ತಂಗಡಿ : ಅಂತರ್ ಕಾಲೇಜು ಮಟ್ಟದ ಖೋ-ಖೋ ಪಂದ್ಯಾಕೂಟ – ಆಳ್ವಾಸ್ ಸಮಗ್ರ ಚಾಂಪಿಯನ್, ಹುಡುಗಿಯರ ವಿಭಾಗದಲ್ಲಿ ಸಪ್ರದ ಕಾಲೇಜು ಬೆಳ್ತಂಗಡಿ ದ್ವಿತೀಯ

ಪ್ರಶಸ್ತಿಯೊಂದಿಗೆ ಆಳ್ವಾಸ್ ತಂಡ
Advertisement

ಬೆಳ್ತಂಗಡಿ, ಡಿ. 11 : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಮಂಗಳೂರು ಯೂನಿವರ್ಸಿಟಿ ಮಟ್ಟದ ಹುಡುಗರ ಹಾಗೂ ಹುಡುಗಿಯರ ಅಂತರ್ ಕಾಲೇಜು ಮಟ್ಟದ ಖೋ-ಖೋ ಪಂದ್ಯಾಟ ನಡೆಯಿತು. ಡಿ. ೦9 ಹಾಗೂ ಡಿ. 10 ಎರಡು ದಿನಗಳ ಕಾಲ ಈ ಟೂರ್ನಮೆಂಟ್ ನಲ್ಲಿ ಹುಡುಗರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ದ್ವಿತೀಯ – ಎಸ್ ಎಮ್ ಎಸ್ ಕಾಲೇಜು ಬ್ರಹ್ಮಾವರ, ತೃತೀಯ – ಎಮ್ ಯು ಕ್ಯಾಂಪಸ್, ಚತುರ್ಥ – ಪುತ್ತೂರು ವಿವೇಕಾನಂದ ಕಾಲೇಜು ತನ್ನದಾಗಿಸಿಕೊಂಡಿತು.

Advertisement

ಹುಡುಗಿಯರ ವಿಭಾಗದಲ್ಲಿ, ಆಳ್ವಾಸ್ ಕಾಲೇಜು ಮೂಡಬಿದಿರೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ದ್ವಿತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ತೃತಿಯ – ಎಂ ಪಿಎಂ ಕಾಲೇಜು ಕಾರ್ಕಳ ಹಾಗೂ ಚತುರ್ಥ ಸ್ಥಾನವನ್ನು ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ ತನ್ನದಾಗಿಸಿಕೊಂಡಿತು.

Advertisement

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಡಾ. ರಾಧಾಕೃಷ್ಣ ಅವರು ಹಾಗೂ ಅತಿಥಿಗಳು ಬಹುಮಾನ ವಿತರಿಸಿ, ಅಭಿನಂದಿಸಿದರು. ಸಭಾ ಕಾರ್ಯಕ್ರಮದಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ಪ್ರಾಂಶುಪಾಲರಾದ ಪ್ರೊ. ಸುರೇಶ್ ವಿ. ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಶರತ್ ಕುಮಾರ್ ಟಿ.ಕೆ., ವಿಟ್ಲ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಶೇಸಪ್ಪ ಹಾಗೂ Alumni Association ಅಧ್ಯಕ್ಷರಾದ ಮಿ. ಜಗದೀಶ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

ಇನ್ನು, ಎಕಾನಾಮಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ ಭಟ್ ಸ್ವಾಗತಿಸಿದರು. ಪಿಜಿ ಕೊ-ಆರ್ಡಿನೇಟರ್ ಆದ ಡಾ. ರವಿ ಎಂ.ಎನ್ ಅವರು ಧನ್ಯವಾದ ಸಮರ್ಪಿಸಿದರು. ಕನ್ನಡ ವಿಭಾಗದ ಅಸಿಸ್ಟೆಂಟ್ ಪ್ರೊ. ಮಾರುತಿ ಜಿ ಅವರು ಕಾರ್ಯಕ್ರಮ ನಿರೂಪಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದಂತಹ ಖೋ-ಖೋ ಪಂದ್ಯಾಕೂಟ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ಕಾಲೇಜಿನ ಟ್ರಸ್ಟಿ ಆಗಿರುವ ಶ್ರೀ ವಿವೇಕ್ ಆಳ್ವಾರವರು, “ಈ ಪಂದ್ಯಾಕೂಟವು ಯಾವ ಖಾಸಗಿ ಕಾಲೇಜಿಗೂ ಕಡಿಮೆಯಿಲ್ಲದಂತೆ ಬಹಳ ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿದೆ.” ಎಂಬ ಅವರ ಮಾತನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ