ಮಂಗಳೂರು, ಡಿ. 06 : ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರ ಮಟ್ಟದ 69ನೇ ನ್ಯಾಶನಲ್ ಗೇಮ್ಸ್ ಅಥ್ಲೆಟಿಕ್ಸ್ ನ 200 ಮೀ. ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಬಾಲಕ ಯುವರಾಜ್ ಡಿ. ಕುಂದರ್ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾರೆ.
ಡಿ.1ರಿಂದ 4ರವರೆಗೆ ಮಧ್ಯಪ್ರದೇಶದ ಇಂದೋರ್ನ ಎಮರಾಲ್ಡ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆಯಿತು. ಯುವರಾಜ್ ಡಿ. ಕುಂದರ್ ಧೀರಜ್ ಕೋಟ್ಯಾನ್ ಮತ್ತು ವೀಣಾ ಡಿ. ಕೋಟ್ಯಾನ್ ರವರ ಪುತ್ರನಾಗಿದ್ದು, ನಗರದ ಸಂತ ಅಲೋಶಿಯಸ್ ಗೊಂಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಬಾಲಕ ಯುವರಾಜ್ ಸಾಧನೆಗೆ ಪ್ರಾಂಶುಪಾಲ ಫಾ. ರೋಹನ್ ಡಿ ಆಲ್ವೇಡಾ, ಉಪಪ್ರಾಂಶುಪಾಲ ಅಪರ್ಣಾ ಸುರೇಶ್, ಲಾರೆಲ್ ಡಿಸೋಜ, ತರಬೇತುದಾರ ಭಕ್ಷಿತ್ ಸಾಲ್ಯಾನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

