ಬೆಂಗಳೂರು : ಚಿನ್ನ ಎಂದರೆ ಎಲ್ಲರಿಗೂ ಇಷ್ಟ, ಆದರೆ ಚಿನ್ನದ ಬೆಲೆ ಕಂಡಾಗ ಯಾರಿಗೂ ಕೈಗೆಟುಕುತ್ತಿಲ್ಲ. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಕಂಡುಬರುತ್ತಿದೆ. 24 ಗ್ರಾಂ ಶುದ್ದ ಚಿನ್ನದ ಬೆಲೆ 12,200 ರಿಂದ 12,86 ರ ನಡುವೆ ಏರಿಳಿತ ಕಂಡು ಬರುತ್ತಿದೆ. ಇಂದು ಒಂದೇ ದಿನ ಚಿನ್ನದ ಬೆಲೆಯಲ್ಲಿ 1740 ರೂ ಕಡಿತ ಆಗಿದ್ದು, ಚಿನ್ನಪ್ರಿಯರಿಗೆ ಸಂತಸ ತಂದಿದೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ನವೆಂಬರ್ 18 ಮಂಗಳವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,366 ರೂಪಾಯಿ ಇದ್ದು, ಇಂದು 174 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,23,660 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು ಒಟ್ಟು 1740 ರೂ ಕಡಿತ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 11,335 ರೂಪಾಯಿ ಇದ್ದು, 160 ರೂ ಕಡಿಮೆ ಆಗಿದೆ. 10 ಗ್ರಾಂ ಬೆಲೆ 1,13,350 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 1600 ರೂ ಇಳಿಕೆ ಆಗಿದೆ.
ಬೆಳ್ಳಿ ಬೆಲೆ ಇಳಿಕೆ
ಬೆಳ್ಳಿ ಬೆಲೆ ಇಂದು 5 ರೂ ಇಳಿಕೆ ಆಗಿದ್ದು, ಗ್ರಾಂ ಬೆಲೆ 162 ರೂ ಆಗಿದ್ದು, ಕೆಜಿಗೆ 1,62,000 ರೂ ಇದೆ.

