ಬೈಂದೂರು : ಶಿಕ್ಷಕಿ ಕಾಲಿಗೆರಗಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ – ಶಾಸಕರ ಕಾಳಜಿಗೆ ಕಣ್ಣೀರಾದ ಟೀಚರ್

Advertisement

ಬೈಂದೂರು, ಏ. 27 : ಇಲ್ಲಿನ ಶಿರೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶದ ರೂವಾರಿ ಎನ್ನಲಾದ ಪ್ರಾಂಶುಪಾಲೆ ಜಯಂತಿ ಅವರ ಕಾಲಿಗೆರಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಗೌರವಿಸಿದರು.

ಕಳೆದ ವರ್ಷ ಶೇ.35ರಷ್ಟು ಫಲಿತಾಂಶವಿದ್ದ ಶಾಲೆ ಈ ಬಾರಿ ಶೇ. 94ರಷ್ಟು ಫಲಿತಾಂಶ ಗಳಿಸಿದೆ. ಕಳೆದ ವರ್ಷ ಶಾಸಕಗುರುರಾಜ್‌ ಗಂಟಿಹೊಳೆ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕರನ್ನು ಕಟು ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದರು.

ಶನಿವಾರ ಶಾಲೆಗೆ ಭೇಟಿ ನೀಡಿದ ಶಾಸಕರು ಭಾವುಕರಾಗಿ ಶಿರಬಾಗಿದರು. ಇದನ್ನು ಕಂಡು ಅಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾದವು. ಸೋತಾಗ ಎಚ್ಚರಿಸುವ ಕೆಲಸ ಆಗಬೇಕು. ಬದಲಾವಣೆಯ ಉದ್ದೇಶದಿಂದಲೇ ಕಳೆದ ಬಾರಿ ಟೀಕೆ ಮಾಡಿದ್ದೆ. ಜಯಂತಿ ಟೀಚರ್ ಮತ್ತು ತಂಡದವರು ಆ ಸವಾಲನ್ನು ಗೆದ್ದಿದ್ದಾರೆ’ ಎಂದು ಶಾಸಕರು ಹೇಳಿದರು. ಶಾಸಕರ ಕಾಳಜಿಗೆ ಜಯಂತಿ ಟೀಚರ್ ಕೂಡ ಕಣ್ಣೀರಾದರು.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ