ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾl ಡಿ. ವಿರೇಂದ್ರ ಹೆಗ್ಗಡೆಯವರ 78ನೇ ವರುಷದ ಜನುಮದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಹೆಗ್ಗಡೆಯವರ ಆರೋಗ್ಯ, ಆಯುಷ್ಯ, ಸಮಾಜ ಸೇವೆ ವೃದ್ಧಿಗಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು ಸೇರಿದಂತೆ ಸಮಾಜದ ಎಲ್ಲಾ ಬಾಂಧವರು ಭಜನೆ ಸೇರಿದಂತೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಅಲ್ಲದೆ, ಹೆಗ್ಗಡೆಯವರ ಜನುಮದಿನದ ಅಂಗವಾಗಿ ವಿವಿಧ ಕಡೆಗಳ ಸಮಾಜಮುಖಿ ಕಾರ್ಯಗಳನ್ನೂ ನಡೆಸಲಾಗಿದೆ.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಇದರ ವತಿಯಿಂದ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಪಾಯಸ ಸಹಿತ ಬಿಸಿ ಗಂಜಿಯೂಟ ವಿತರಿಸಲಾಯಿತು., ಓಂ ಶ್ರೀ ಮಂಜುನಾಥಯ ನಮಃ ಭಕ್ತಿ ಸಂಗಮ ಕಲಾ ವೃಂದ ನಮ್ಮದು ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಎರಡು ತಂಡಗಳಿವೆ ಖಾವಂದರ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ಶಿವಮೊಗ್ಗದಲ್ಲಿ ಭಜನೆ ಕಾರ್ಯಕ್ರಮ ನಡೆಸಲಾಯಿತು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು, ಹಾಗೂ ಭಜನಾ ಪರಿಷತ್ ಕಾಸರಗೋಡು ತಾಲೂಕು ವತಿಯಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ 78ನೇ ವರುಷದ ಹುಟ್ಟು ಹಬ್ಬದ ಪ್ರಯುಕ್ತವಾಗಿ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ, ರುದ್ರಾಭಿಷೇಕ, ವಿಶೇಷ ಕಾರ್ತಿಕ ಪೂಜೆ ಹಾಗೂ ಹೆಗ್ಗಡೆಯವರ ಶ್ರೇಯೋಭಿವೃದ್ಧಿಗೆ ಪ್ರಾರ್ಥನೆ ಗೈಯ್ಯಲಾಯಿತು, ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿ-ಉಪ್ಪಿನಂಗಡಿ . ಇಲ್ಲಿ ಭಜನಾ ಸೇವೆಯನ್ನು ನಡೆಸಿ, ಖಾವಂದರಿಗೆ ದೀರ್ಘಾಯುಷ್ಯ ಮತ್ತು ಕ್ಷೇತ್ರ ಬೆಳಗಲಿ. ಕ್ಷೇತ್ರದ ಕಳಂಕ ದೂರವಾಗಲಿಯೆಂದು, ಶ್ರೀ ದೇವಿಯಲ್ಲಿ ಪ್ರಾರ್ಥಿಸಲಾಯಿತು, ಕಾಲಭೈರವೇಶ್ವರ ಭಜನಾ ತಂಡ ಬೀಸು ಇವರಿಂದ ಶ್ರಮದಾನ ಕಾರ್ಯಕ್ರಮ ನಡೆಯಿಸಲಾಯಿತು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ತಾಲೂಕು ಭಜನಾ ಪರಿಷತ್ತು ಗುರುವಾಯನಕೆರೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಮತ್ತು ಪ್ರಗತಿ ಬಂಧು ಒಕ್ಕೂಟ ಉರುವಾಲು ಇವುಗಳ ಸಹಕಾರದೊಂದಿಗೆ ಖಾವಂದರಿಗೆ ಸದಾ ಮನಃಶಾಂತಿ, ಆರೋಗ್ಯ, ನೆಮ್ಮದಿ ಹಾಗೂ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಮತ್ತು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಕ್ತಿಯನ್ನು ನೀಡುವಂತೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಮತ್ತು ಭಜನೆಯನ್ನು ಮಾಡಲಾಯಿತು, ತೀರ್ಥಹಳ್ಳಿ ಅರಣ್ಯ ಇಲಾಖೆಯ ಡೆಪ್ಯೂಟಿ RFOರವರಾದ ಆದಿತ್ಯ ರಾವ್., ಗಸ್ತು ಅರಣ್ಯಪಾಲಕರಾದ ಲಕ್ಷ್ಮಣ್ ಸಾರ್, ಅರಣ್ಯ ವೀಕ್ಷಕರಾದ ವಿನಾಯಕ, ವೀಕ್ಷಕರಾದ ದಿವಾಕರ್, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಲಿ ಹೊನ್ನೆಕೇರಿ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್ ಎಂ ಮಂಜುನಾಥ್ ರವರ ಹಾಗೂ ಪ್ರಭಾಕರ್ ಶೆಟ್ರು ಹೊನ್ನೆಕೇರಿ ಇವರ ಸಹಕಾರದೊಂದಿಗೆ ಕಿರಿಯ ಪ್ರಾಥಮಿಕ ಶಾಲೆ ರಾಗಿ ಹಕ್ಕಲು ಅಂಗನವಾಡಿ ಕೇಂದ್ರ ಪಟ್ಟ ಮನೆ(2) ಹಿರಿಯಪ್ರಾಥಮಿಕ ಪಾಠಶಾಲೆ ಕಟ್ಟೆ ಹಕ್ಕಲು. ಅಂಗನವಾಡಿ ಕೇಂದ್ರ ಕಟಗಾರು ಅಂಗನವಾಡಿ ಕೇಂದ್ರ ಸಾಲ್ಲಡಿಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮರ್ಧಾಳ ಶ್ರೀ ಕ್ಷೇತ್ರದಲ್ಲಿ ಪೂಜ್ಯ ಖಾವಂದರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಮಾಡಿ ಪೂಜ್ಯರಿಗೆ ಉತ್ತಮವಾದ ಅರೋಗ್ಯ,ಮನಶಾಂತಿ ಮತ್ತು ನೆಮ್ಮದಿಯನ್ನು ಅ ಭಗವಂತ ನೀಡಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು, ವಿಟ್ಲ ಶ್ರೀ ಪಂಚಲಿಂಗೆಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾಥನೆ.
ಧರ್ಮಸ್ಥಳ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಆಯುಷ್ಯ,ಆರೋಗ್ಯ ವೃದ್ದಿಯಾಗಲೆಂದು ವಿಶೇಷ ಪೂಜೆ ನಡೆಸಲಾಯಿತು, ವಿಟ್ಲ ವಲಯ ಪರಿಷತ್ ಅಧ್ಯಕ್ಷರಾದ ಸುಂದರ ಕೇದಗೆ ಇವರ ನೇತೃತ್ವದಲ್ಲಿ ಅಯ್ಯಪ್ಪ ಬೆಟ್ಟ ಪಾಂಡೇಲು ಕುಂಡಡ್ಕ ಕುಳ ವಿಟ್ಲಮುಡ್ನೂರ್ ಅಯ್ಯಪ್ಪ ಮಂದಿರದಲ್ಲಿ ಧರ್ಮಸ್ಥಳ ಪೂಜ್ಯ ಖಾವಂದರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮೂಡುಬಿದ್ರಿ ತಾಲೂಕಿನ ಮಾರ್ಗದರ್ಶನದೊಂದಿಗೆ, ಭಜನಾ ಪರಿಷತ್ ನ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ಸುವರ್ಣ ಪೆರಿಬೆಟ್ಟು ಹಾಗೂ ಜಿಲ್ಲಾ ಸಮನ್ವಯಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ರವರ ಹಾಗೂ ಶ್ರೀ ಕ್ಷೇತ್ರ ಇಟಲ ದೇವಸ್ಥಾನದ ಆಡಳಿತ ಮೊಕ್ತೇಸರಾದ ಶ್ರೀ ವಿಮಲ್ ಕುಮಾರ್ ಪಣಪಿಲ ಅರಮನೆಯವರ ಸಹಕಾರದೊಂದಿಗೆ ಧರ್ಮಸ್ಥಳದ ಪೂಜ್ಯ ಖಾವಂದರ ಹುಟ್ಟಿದ ದಿನದ ಪ್ರಯುಕ್ತ,ಪೂಜ್ಯರಿಗೆ ಆಯುಷ್ಯ,ಆರೋಗ್ಯ ವೃದ್ಧಿಯಾಗಲೆಂದು ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ,. ಶ್ರೀ ಇಟಲ ಸೋಮನಾಥೇಶ್ವರ ಭಜನಾ ತಂಡ ಪಣಪಿಲರವರಿಂದ ಭಜನೆ ಸೇವೆ ಮಾಡಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕ ಸುಬ್ರಮಣ್ಯ ಪ್ರಸಾದ್ ಅವರ ಮಾರ್ಗದರ್ಶನದಂತೆ ಕುಣಿತ ಭಜನಾ ಗುರು ನಾಗೇಶ್ ಬಿ. ನೆರಿಯ ಅವರ ಮುಂದಾಳತ್ವದಲ್ಲಿ ನಾರ್ಯ ಪೊದುಂಬಿಲ ಶ್ರೀ ಷಣ್ಮುಖ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆಯ ನಂತರ ಹೆಗ್ಗಡೆ ಅವರಿಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಆಯಸ್ಸು ಹಾಗೂ ಇನ್ನಷ್ಟು ಜನ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಕ್ತಿಯನ್ನು ನೀಡುವಂತೆ ಷಣ್ಮುಖ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಧರ್ಮಸ್ಥಳ ಇದರ ರಾಜ್ಯ ಸಮಿತಿಯ ವತಿಯಿಂದ ಬೈಪಾಡಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಭಜನೆ ನಡೆದು ಪೂಜ್ಯ ಖಾವಂದರಿಗೆ ಸದಾ ಸುಖ, ಮನಃಶಾಂತಿ ,ಆರೋಗ್ಯ, ನೆಮ್ಮದಿ ಹಾಗೂ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆ ನೀಡುವಂತೆ ಶ್ರೀ ಸಿದ್ಧಿ ವಿನಾಯಕ ದೇವರಲ್ಲಿ ಪ್ರಾರ್ಥಿಸಲಾಯಿತು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಧರ್ಮಸ್ಥಳ ಇದರ ರಾಜ್ಯ ಸಂಚಾಲಕರಾದ ಶ್ರೀ ಸುಬ್ರಮಣ್ಯ ಪ್ರಸಾದ್ ರವರ ಮಾರ್ಗದರ್ಶನದಂತೆ ಭಜನಾ ಪರಿಷತ್ ಮುಂಡಾಜೆ ವಲಯ ಹಾಗೂ ಗ್ರಾಮಭಿವೃದ್ಧಿ ಯೋಜನೆ ಮುಂಡಾಜೆ ವಲಯ ಮತ್ತು ಶಿವ ಪಾರ್ವತಿ ಭಜನಾ ಮಂಡಳಿ ಚಾರ್ಮಾಡಿ ಹಾಗು ನಾಗಕನ್ನಿಕ್ಕೆ ಭಜನಾ ಮಂಡಳಿ ಇವುಗಳ ಸಹಕಾರ ಹಾಗೂ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾಧ ರವಿರಾಜ್ ಚಾರ್ಮಾಡಿ ಇವರ ನೇತೃತ್ವದಲ್ಲಿ ಪೂಜ್ಯಖಾವಂದರಿಗೆ ಆರೋಗ್ಯ ಸುಖ- ಶಾಂತಿ, ನೆಮ್ಮದಿ ಹಾಗೂ ಇನ್ನು ಮುಂದಕ್ಕೂ ಕೂಡ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವರಿಗೆ ಶಕ್ತಿಯನ್ನು ನೀಡುವಂತೆ ನಾಗಕನ್ನಿಕೆ ನಾಗಾಯಕ್ಷಿಣ ದೈವಸ್ಥಾನ ಸರ್ಪಹಿತ್ಲು ಚಾರ್ಮಾಡಿಯಲ್ಲಿ ಭಜನಾ ಸೇವೆ ಹಾಗೂ ವಿಶೇಷ ಪ್ರಾರ್ಥನೆ ಮಾಡಲಾಯಿತು, ಶ್ರೀ ಮಂಜುನಾಥೇಶ್ವರ ಭಜನ ಪರಿಷತ್ತಿನ ರಾಜ್ಯ ಸಂಚಾಲಕರಾದ ಶ್ರೀ ಸುಬ್ರಮಣ್ಯ ಪ್ರಸಾದ್ ರವರ ಮಾರ್ಗದರ್ಶನ ತಾಲೂಕು ಭಜನಾ ಪರಿಷತ್ತು ಗುರುವಾಯನಕೆರೆ, ಭಜನಾ ಪರಿಷತ್ತು ತಣ್ಣೀರುಪಂತ ವಲಯ, ಗ್ರಾಮಾಭಿವೃದ್ಧಿ ಯೋಜನೆ ತಣ್ಣೀರುಪಂತ ವಲಯ ಮತ್ತು ಶ್ರೀಕೃಷ್ಣ ಭಜನಾ ಮಂಡಳಿ ಕರಾಯ ಇವುಗಳ ಸಹಕಾರದೊಂದಿಗೆ ಶ್ರೀ ಮಂಜುನಾಥೇಶ್ವರ ಭಜನ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ ಚಂದ್ರಶೇಖರ ಸಾಲ್ಯಾನ್ ಇವರ ನೇತೃತ್ವದಲ್ಲಿ ಪೂಜ್ಯ ಖಾವಂದರಿಗೆ ಸದಾ ಮನಃಶಾಂತಿ, ಆರೋಗ್ಯ, ನೆಮ್ಮದಿ ಹಾಗೂ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಮತ್ತು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಕ್ತಿಯನ್ನು ನೀಡುವಂತೆ ಕರಾಯದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು
.

