ಬೆಳ್ತಂಗಡಿ : ಹೈ ಕೋರ್ಟ್ ವಕೀಲರಾದ ನಾರಾಯಣ ಸ್ವಾಮಿ ನ.17 ರಂದು ಬೆಳ್ತಂಗಡಿ ನ್ಯಾಯಾಲಯದ ವಕೀಲರ ಭವನಕ್ಕೆ ಭೇಟಿ ನೀಡಿದರು. ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಹೈಕೋರ್ಟ್ ಖ್ಯಾತ ವಕೀಲ ನಾರಾಯಣ ಸ್ವಾಮಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಭವನಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಬೆಳ್ತಂಗಡಿ ವಕೀಲರ ಸಂಘದ ಹೊಸ ಅಧ್ಯಕ್ಷ ಅಲೋಶಿಯಸ್.ಎಸ್.ಲೋಬೊ, ಉಪಾಧ್ಯಕ್ಷ ಶ್ರೀನಿವಾಸ್ ಗೌಡ ಮತ್ತು ಪದಾಧಿಕಾರಿಗಳಾದ ಪ್ರಶಾಂತ್.ಎಮ್,ಉಷಾ.ಎನ್.ಜಿ, ಅಸ್ಮಾ, ಮಮ್ತಾಜ್ ಬೇಗಂ,ಸಂದೀಪ್ ಡಿ’ಸೋಜಾ ಇವರನ್ನು ನಾರಾಯಣ ಸ್ವಾಮಿ ಶಾಲು ಹಾಕಿ ಗೌರವಿಸಿದರು.
ನಾರಾಯಣ ಸ್ವಾಮಿ ಭೇಟಿ ವೇಳೆ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ ಸ್ವಾಗತಿಸಿಕೊಂಡರು. ಜೊತೆಯಲ್ಲಿ ಸದಸ್ಯರಾದ ಮನೋಹನ್ ಕುಮಾರ್, ಪ್ರಶಾಂತ್ , ಶ್ರೀನಿವಾಸ್ ಗೌಡ, ವಸಂತ ಮರಕಡ, ಸೇವಿಯಾರ್ ಪಾಲೇಲಿ, ಉಷಾ, ಮಮ್ತಾಜ್ ಬೇಗಂ, ಶಿವಕುಮಾರ್, ಸ್ವರ್ಣ ಲತಾ, ನವಾಝ್, ಅಸ್ಮಾ, ಲತಾ ಭಾಗಿಯಾಗಿದ್ದರು.

