ಉಜಿರೆ, ಡಿ.08 : ರಾಜ್ಯದ ಅತೀ ದೊಡ್ಡ ಮಲ್ಟಿ ಟ್ಯಾಲೆಂಟ್ ರಿಯಾಲಿಟಿ ಶೋ ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್-೨ಕ್ಕೆ ನಮ್ಮ ತಾಲೂಕಿನ ಬಹುಖ್ಯಾತಿ ಪಡೆದಿರುವ ಸಹನ್ ನೇತೃತ್ವದ ಉಜಿರೆಯ ಹಿಪ್-ಬಾಯ್ಸ್ ಡಾನ್ಸ್ ಕ್ರೀವ್ ತಂಡ ಆಯ್ಕೆಯಾಗಿದೆ. “ಕರುನಾಡು Got ಟ್ಯಾಲೆಂಟ್” ಎನ್.ಪಿ ಪ್ರೊಡಕ್ಷನ್ ನಲ್ಲಿ ಸ್ಪಂದನ ಟಿ.ವಿ. ಪ್ರಸ್ತುತಪಡಿಸುವ ರಾಜ್ಯದ ಅತೀ ದೊಡ್ಡ ಮಲ್ಟಿ ಟ್ಯಾಲೆಂಟ್ ರಿಯಾಲಿಟಿ ಶೋ ಆಗಿದೆ.

ಇತ್ತೀಚೆಗೆ ನಡೆದಂತಹ ಮೆಗಾ ಆಡಿಷನ್‌ನಲ್ಲಿ ಹಿಪ್-ಬಾಯ್ಸ್ ಡಾನ್ಸ್ ಕ್ರೀವ್ ತಂಡದ ಪ್ರದರ್ಶನ ತೀರ್ಪುಗಾರರ ಮೆಚ್ಚುಗೆ ಗಳಿಸಿದೆ. ಡಿ.6ರಂದು ನಡೆದ ಮೆಗಾ ಆಡಿಷನ್‌ನಲ್ಲಿ ಹಿಪ್-ಬಾಯ್ಸ್ ಡ್ಯಾನ್ಸ್ ಕ್ರೀವ್‌ನ ನೃತ್ಯಗಾರ್ತಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಮುಂದಿನ ಹಂತಕ್ಕೆ ತೇರ್ಗಡೆಯಾಗಿದ್ದಾರೆ. ತಂಡದಲ್ಲಿ ಸನ್ಮತಾ ಕುಕ್ಕಾವು, ಆಂಜೆಲಿನ್ ಡಿಸೋಜಾ, ದೀಕ್ಷಾ, ಧನ್ನಿ ಭಂಡಾರಿ, ಆಪ್ತ, ಅನ್ವಿತಾ, ರೇಖಾ, ಮನ್ವಿತಾ ಪ್ರಭು, ಧೃತಿ ಮತ್ತು ಸಮನ್ನಿ ಸೇರಿ ಒಟ್ಟು ಹತ್ತು ಪ್ರತಿಭಾವಂತ ನೃತ್ಯಗಾರ್ತಿಯರು ಭಾಗವಹಿಸಿದ್ದರು.

